ಬಾಗಲಕೋಟೆ: ಕೆನರಾ ಬ್ಯಾಂಕ್ ಶಾಖೆಗಳ ಮೂಲಕ ಜಿಲ್ಲೆಯ 95 ಸ್ವ-ಸಹಾಯ ಗುಂಪುಗಳಿಗೆ ಒಟ್ಟು 195 ಲಕ್ಷ ರೂ.ಗಳ ಸಾಲವನ್ನು ವಿತರಿಸಲಾಗಿದೆ ಎಂದು ಕೆನರಾ ಬ್ಯಾಂಕ್‍ನ ಕ್ಷೇತ್ರೀಯ ವ್ಯವಸ್ಥಾಪಕಿ ಕೆ.ಆರ್.ಶೈಲಜಾ ಹೇಳಿದರು.
ಇಲಕಲ್ಲ ನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾ ಪಂಚಾಯತ, ಇಲಕಲ್ಲ ತಾಲೂಕಾ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡ ಸ್ವ-ಸಹಾಯ ಗುಂಪುಗಳಿಗೆ ಹಮ್ಮಿಕೊಂಡ ಸಾಲ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ 95 ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಿಸಾಗಿದ್ದು, ಇನ್ನುಳಿದ ಎನ್.ಆರ್.ಎಲ್.ಎಂ ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಿಸಲು ಕೆನರಾ ಬ್ಯಾಂಕ್ ಬದ್ದವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹುನಗುಂದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಮುಧೋಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ಎನ್.ಆರ್.ಎಲ್.ಎಂ ಜಿಲ್ಲಾ ವ್ಯವಸ್ಥಾಪಕಿ ಅನ್ನಪೂರ್ಣ ಸೇರಿದಂತೆ ಕೆನರಾ ಶಾಖೆಯ ವ್ಯವಸ್ಥಾಪಕರು, ಸ್ವ-ಸಹಾಯ ಗುಂಪುಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.