ಹನೂರು: ಸ್ವ ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿ, ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಸಂಯೋಜಕ ಜನಧ್ವನಿ ಬಿ.ವೆಂಕಟೇಶ್ ಸಲಹೆ ನೀಡಿದರು.
ಪಟ್ಟಣ ಸಮೀಪದ ಆರ್.ಎಸ್.ದೊಡ್ಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳೆಯರಿಗೆ ಸ್ವಯಂ ಉದ್ಯೋಗ ಸಂಬಂಧ ಅರಿವು ಮೂಢಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹನೂರು ಭಾಗದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಅದರಲ್ಲೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಟೈಲರಿಂಗ್, ಬುಟ್ಟಿ ನೇಯುವಿಕೆ, ಕರಕುಶಲ ವಸ್ತುಗಳ ತಯಾರಿಕೆ ಸೇರಿದಂತೆ ಇನ್ನು ಅನೇಕ ಸ್ವ ಉದ್ಯೋಗಗಳಿವೆ. ಜತೆಗೆ ಜೇನು ಸಾಕಾಣಿಕೆಯಿಂದ ಸಾವಿರಾರು ರೂ ಸಂಪಾದಿಸಬಹುದಾಗಿದೆ. ಆದ್ದರಿಂದ ಯಾರು ಸಮಯ ವ್ಯರ್ಥ ಮಾಡದೇ ಸ್ವ ಉದ್ಯೋಗ ಹೊಂದಬೇಕು ಎಂದು ತಿಳಿಸಿದರು.
ಕುರುವಿಲ್ ಸಂಸ್ಥೆಯ ಕುಮಾರ್ ಮಾತನಾಡಿ, ಕರಕುಶಲ ವಸ್ತುಗಳ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸುಧಾ, ಮ.ಬೆಟ್ಟ ಮಂಡಲ ಅಧ್ಯಕ್ಷೆ ಮೀನಾ, ಕಾರ್ಯಕಾರಿಣಿ ಸದಸ್ಯೆ ಜಯಶೀಲಾ, ಮಂಗಳಮ್ಮ, ಅಂಬಿಕಾ, ರಾಜೇಶ್ವರಿ ಇತರರು ಇದ್ದರು.