ಬಸವಕಲ್ಯಾಣ: ಹನ್ನೆರಡನೇ ಶತಮಾನದಲ್ಲಿ ವಿಶ್ವದಲ್ಲಿಯೇ ಸ್ತ್ರೀಯರಿಗೆ ಸರ್ವ ಸಮಾನತೆ ಕೊಟ್ಟವರು ವಿಶ್ವಗುರು ಬಸವಣ್ಣನವರು ಎಂದು ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ನಗರದ ಶಾಸ್ತ್ರೀ ಭವನದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಬಸವಕಲ್ಯಾಣ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸೂಸೈಟಿ(ಬಿಕೆಒಜಿಎಸ್) ಉದ್ಘಾಟನಾ, ನೂತನ ಪದಾದಿಕಾರಿಗಳ ಪದಗ್ರಹಣ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮಹಿಳಾ ದಿನಾಚರಣೆ ದಿನವೇ ಸ್ತ್ರೀ ರೋಗ ತಜ್ಞರ ಸಂಘ ಉದ್ಘಾಟನೆ ಮಾಡಿರುವುದು ಮತ್ತು ಸಮಾಜ ಸೇವೆಯಲ್ಲಿ ಆಸಕ್ತಿ ವಹಿಸಿ ಕಾರ್ಯನಿರ್ವಹಿಸುತ್ತಿರುವ ಡಾ.ಶಾಂತಾ ದುರ್ಗೆ ಅವರನ್ನು ಅಧ್ಯಕ್ಷರಾಗಿ ಮಾಡಿರುವುದು ಖುಷಿ ತಂದಿದೆ. ಅವರು ಬೇಟಿ ಬಜಾವೂ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಮಹತ್ತರ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ಅಸೋಸಿಯೇಷನ್ ಅಧ್ಯಕ್ಷೆ ಡಾ.ಭಾರತಿ ರಾಜಶೇಖರ ಮಾತನಾಡಿ, ಸಂಘ, ರಾಜ್ಯ ಸೇರಿ ದೇಶದ ವಿವಿಧ ರಾಜ್ಯಗಳಿಗೂ ವಿಸ್ತರಿಸಿದ್ದು, ಇಲ್ಲಿ ಸ್ಥಾಪನೆಯಾಗಿರುವ ಘಟಕ ರಾಜ್ಯದಲ್ಲಿ ೨೩ನೇ ಘಟಕವಾಗಿದೆ. ಸ್ತ್ರೀ ರೋಗ ತಜ್ಞರ ಸಂಘಟನೆ, ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾನವೇ ಅಸೋಸಸಿಯೇಷನ್ ಆಶಯವಾಗಿದೆ ಎಂದರು.
ಎಸ್‌ಬಿ ಸಂಸ್ಥೆ ನಿರ್ದೇಶಕಿ ಡಾ.ನೀಲಾಂಬಿಕಾ ಸೇರಿಕಾರ ಮಾತನಾಡಿ, ಮಹಿಳಾ ದಿನಾಚರಣೆ ಭಾಷಣಕ್ಕೆ ಸೀಮಿತವಾಗುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಆಗಾಗ ಬೆಳಕಿಗೆ ಬರುತ್ತಲೇ ಇವೆ ಎಂದು ಕಳವಳ ವ್ಯಕ್ತಪಡಿಸಿ, ಮಹಿಳೆಯರ ಸಂರಕ್ಷಣೆಯ ಜತೆಗೆ ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು ಎಂದರು.
ರಾಜ್ಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ಅಸೋಸಿಯೇಷನ್‌ನ ಭಾವಿ ಅಧ್ಯಕ್ಷ ಡಾ.ದುರ್ಗಾದಾಸ ಅಸ್ರಾನಾ, ನಿಕಟಪೂರ್ವ ಅಧ್ಯಕ್ಷೆ ಡಾ.ವಿದ್ಯಾ ಥೋಬ್ಬಿ, ರಾಜ್ಯ ಕಾರ್ಯದರ್ಶಿ ಡಾ.ರಾಜಶ್ರೀ ಉಪನ್ಯಾಸ ನೀಡಿದರು. ಬಸವಕಲ್ಯಾಣ ಒಬಿಎಸ್ ಅಧ್ಯಕ್ಷೆ ಡಾ.ಶಾಂತಾ ದುರ್ಗೆ ಪ್ರಾಸ್ತಾವಿಕ ಮಾತನಾಡಿದರು. ಸಲಹೆಗಾರ ಡಾ.ಸುಶೀಲಾ ಹೊಳಕುಂದೆ ಸ್ವಾಗತಿಸಿದರು. ಡಾ.ಜ್ಯೋತಿ ಹಂಚಾಟೆ ಹಾಗೂ ಐಶ್ವರಿ ದುರ್ಗೆ, ಡಾ.ಸ್ಮಿತಾ ಕಳ್ಳಿಗುಡಿ ವಂದಿಸಿದರು.
ಅನುಭವ ಮಂಟಪ ಟ್ರಸ್ ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ, ಡಾ.ವಿ.ಬಿ.ಸೂರ್ಯವಂಶಿ, ಡಾ.ಜಿ.ಎಸ್.ಭುರಾಳೆ, ಢಾ.ವಿ.ಎಸ್.ಮಠಪತಿ, ಡಾ ಸಗ್ರಾಮ ಬಸನಾಳೆ, ಡಾ.ಬಿ.ವಿರೆಡ್ಡಿ, ಡಾ.ಫಾರೂಕ್, ಬಸವಕಲ್ಯಾಣ ಆಸ್ಪತ್ರೆ ಸಿಎಂಒ ಡಾ.ಅಪರ್ಣಾ, ಡಾ.ಇರ್ಶಾನಾ, ಡಾ.ಕ್ಷಮಾ ಭುರಳೆ, ಡಾ.ಬಬಿತಾ ಬಿ., ಡಾ.ಸಂಗೀತಾ ಹುಲಸೂರೆ ಇತರರಿದ್ದರು.
ಸನ್ಮಾನ: ಬಸವಕಲ್ಯಾಣ ಘಟಕದ ನೂತನ ಅಧ್ಯಕ್ಷೆ ಡಾ.ಶಾಂತಾ ದುರ್ಗೆ, ಕಾರ್ಯದರ್ಶಿ ಡಾ.ಪ್ರಿಯಾಂಕಾ ವರವಟ್ಟೆ, ಕೋಶಾಧ್ಯಕ್ಷೆ ಡಾ.ದೀಪಾ ಹೊಳಕುಂದೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವೈದ್ಯಕೀಯ ಜ್ಞಾನ ಬೆಳೆಯಬೇಕು. ಹೊಸ ಆಧುನಿಕ ತಂತ್ರಜ್ಞಾನ, ಪರಿಕರಗಳ ಬಳಕೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಜತೆಗೆ ರಚನಾತ್ಮಕ ಕಾರ್ಯಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಸ್ರ್ರೀ ರೋಗ ತಜ್ಞರ ಸೂಸೈಟಿಯ ಉದ್ದೇಶವಾಗಿದ್ದು, ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಮಾದರಿಯ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಎಲ್ಲರ ಕಾಳಜಿ ಮತ್ತು ಸಹಕಾರ ಅವಶ್ಯಕ.
| ಡಾ.ಶಾಂತಾ ದುರ್ಗೆ ಅಧ್ಯಕ್ಷೆ, ಬಿಕೆಒಜಿಎಸ್