ಗುಂಡ್ಲುಪೇಟೆ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮಹಿಳಾ ಓದುಗರಿಗಾಗಿ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರ ಪೈಕಿ ಐವರು ಅದೃಷ್ಟಶಾಲಿಗಳನ್ನು ಲಕ್ಕಿ ಡಿಪ್ ಮೂಲಕ ಗುರುವಾರ ಆಯ್ಕೆ ಮಾಡಲಾಯಿತು.
ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ನಾಗೇಶ್, ಮಾಜಿ ಅಧ್ಯಕ್ಷೆ ಭಾಗ್ಯಮ್ಮ, ದೇವಾಲಯದ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಮಂಜುಳಾ ತಲಾ ಒಂದು ಕೂಪನ್ ತೆಗೆಯುವ ಮೂಲಕ ಐವರು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು.
ಪುರಸಭಾ ಸದಸ್ಯ ನಾಗೇಶ್ ಮಾತನಾಡಿ, ವಿಜಯವಾಣಿ ಪತ್ರಿಕೆ ತನ್ನದೇ ಆದ ಹೊಸತನಗಳ ಮೂಲಕ ಜನರ ಮನ-ಮನೆಗಳಲ್ಲಿ ನೆಲೆಯೂರಿದೆ. ಸಮಾಜಪರ ಕಾರ್ಯಕ್ರಮಗಳ ಜತೆಗೆ ವಿದ್ಯಾರ್ಥಿಗಳ ಕಲಿಕೆ ಹಾಗೂ ಉದ್ಯೋಗಾವಕಾಶಕ್ಕೆ ಉದ್ಯೋಗಮಿತ್ರ ಪುರವಣಿ ತರುತ್ತಿದೆ. ಕುಟುಂಬದ ಪತ್ರಿಕೆಯಾದ ವಿಜಯವಾಣಿಯು ಹೆಚ್ಚಿನ ಮಹಿಳಾ ಓದುಗರ ಬಳಗವನ್ನು ಹೊಂದಿದ್ದು ಅವರಿಗಾಗಿ ನಾರಿ ನಿನಗೊಂದು ಸ್ಯಾರಿ ಕಾರ್ಯಕ್ರಮದಲ್ಲಿ ಸೀರೆಯನ್ನು ಗೆಲ್ಲುವ ಅವಕಾಶ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಸಭೆ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಮಾತನಾಡಿ, ಪತ್ರಿಕೆಯು ತನ್ನ ಜನಪರಕಾಳಜಿಯಿಂದ ಮನೆಮಾತಾಗಿದೆ. ಯಾವುದೇ ಸಮಸ್ಯೆಗಳ ಬಗ್ಗೆ ವರದಿ ಪ್ರಕಟವಾದ ಕೂಡಲೇ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ರೈತರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಪ್ರತ್ಯೇಕ ಅಂಕಣಗಳ ಮೂಲಕ ಸದಭಿರುಚಿಯ ಲೇಖನಗಳನ್ನು ಪ್ರಕಟಿಸುತ್ತಿರುವುದರಿಂದ ಎಲ್ಲರ ಮನೆಗಳಲ್ಲಿಯೂ ಸ್ಥಾನ ಪಡೆದಿದೆ ಎಂದು ಹೇಳಿದರು.
ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾತನಾಡಿ, ವಿಜಯವಾಣಿಯು ತನ್ನ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸುವ ಮೂಲಕ ಸಮಾಜದ ಎಲ್ಲ ವರ್ಗಗಳ ಓದುಗ ಬಳಗವನ್ನು ಹೊಂದಿ ಕನ್ನಡದ ನಂ.1 ಪತ್ರಿಕೆಯಾಗಿದೆ. ಪರಿಸರ ಹಾಗೂ ವನ್ಯಜೀವಿಗಳಿಗೆ ಪೂರಕವಾದ ಕಾಳಜಿಯನ್ನು ಮೆರೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಸತ್ಸಂಗದ ಪುಷ್ಪಲತಾ, ಆಶಾ, ಲೀಲಾ, ಕವಿತಾ, ಸುಜಾತಾ, ಮಂಜುಳಾ, ದೀಪಕ್, ಶ್ರೀನಾಥ್, ವೇದಮೂರ್ತಿ ಹಾಗೂ ಇತರರು ಇದ್ದರು.
ಆಯ್ಕೆಯಾದ ಅದೃಷ್ಟಶಾಲಿಗಳು
ಪಟ್ಟಣದ ಗಣೇಶ ಲೇಔಟ್‌ನ ಶಾಂತಮ್ಮ, ವಿಜಯನಾರಾಯಣಸ್ವಾಮಿ ದೇವಾಲಯ ರಸ್ತೆಯ ನಿವಾಸಿ ಪುಷ್ಪಲತಾ ಮತ್ತು ಗಂಗಮ್ಮ, ದರ್ಶನ್ ಲೇಔಟ್‌ನ ನಂದಿನಿ, ಅಗತಗೌಡನಹಳ್ಳಿಯ ನಾಗಮ್ಮ ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾದ ವಿಜೇತರಾಗಿದ್ದಾರೆ.