ಜಿಲ್ಲೆ

ಸ್ಯಾಂಡ್ ಡಾಲರ್​ಗಳು ಪತ್ತೆ

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಅಪರೂಪದ ಕಡಲ ಜೀವಿ ಸ್ಯಾಂಡ್ ಡಾಲರ್​ಗಳು ಕಂಡು ಬಂದಿವೆ.

ಸ್ಟಾರ್ ಫಿಶ್​ಗಳ ವರ್ಗಕ್ಕೆ ಸೇರಿದ ಇವು ಸಮುದ್ರದಲ್ಲಿ ಅಂದಾಜು 19 ಮೀಟರ್ ಆಳದಲ್ಲಿ ಜೀವಿಸುತ್ತವೆ. ನಾಲ್ಕು ಇಂಚಿನವರೆಗೆ ಬೆಳೆಯುವ ಇವು ನಾಣ್ಯದಂತೆ ಕಾಣುತ್ತವೆ. ಮೇಲ್ಮೈಯಲ್ಲಿ ಹೂವಿನ ಆಕಾರದ ಚಿತ್ರವಿರುತ್ತವೆ. ತಳ ಭಾಗದಲ್ಲಿ ಬಾಯಿಯನ್ನು ಹೊಂದಿದ್ದು, ಸಣ್ಣ ಮೀನು, ಸಮುದ್ರ ಪಾಚಿಗಳನ್ನು ತಿಂದು 8 ವರ್ಷದವರೆಗೂ ಬದುಕುತ್ತವೆ. 2006ರ ಹೊತ್ತಿಗೆ ಭಟ್ಕಳದಲ್ಲಿ ಇವು ಕಾಣಿಸಿಕೊಂಡ ವರದಿ ಇದೆ ಎಂದು ಸಾಗರ ಜೀವ ಶಾಸ್ತ್ರಜ್ಞ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದ್ದಾರೆ.

EndFragment