ಮೈಸೂರು: ದಲಿತ ಮಹಿಳೆಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಸ್ಯಾಂಟ್ರೋ ರವಿ ಬಂಧನಕ್ಕೆ ಆಗ್ರಹಿಸಿ ಜೆಡಿಎಸ್‌ನಿಂದ ಭಾನುವಾರ ಪ್ರತಿಭಟನೆ ನಡೆಯಿತು.
ನಗರದ ಗಾಂಧಿ ಚೌಕದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ರವಿ ವಿರುದ್ಧ ಈವರೆಗೆ ಕ್ರಮ ತೆಗೆದುಕೊಳ್ಳದ ರಾಜ್ಯ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದಲ್ಲಿ ಶೋಷಿತರಿಗೆ ರಕ್ಷಣೆ ಇಲ್ಲ. ಅನೈತಿಕ ಚಟುವಟಿಕೆ ನಡೆಸುವವರನ್ನು ಮತ್ತು ರೌಡಿ ಶೀಟರ್‌ಗಳನ್ನು ರಕ್ಷಣೆ ಮಾಡುತ್ತಿದೆ. ರಾಜ್ಯ ಗೃಹ ಇಲಾಖೆಯೇ ಆರೋಪಿ ಸ್ಯಾಂಟ್ರೋ ರವಿ ರಕ್ಷಣೆಗೆ ನಿಂತಿದೆ ಎಂದು ದೂರಿದರು.
ಆರೋಪಿ ಸ್ಯಾಂಟ್ರೋ ರವಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಎಸ್‌ಬಿಎಂ ಮಂಜು, ಕೆ.ವಿ. ಮಲ್ಲೇಶ್, ಚಲುವೇಗೌಡ, ಎಚ್.ಕೆ. ರಾಮು, ಲಿಂಗಣ್ಣ, ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತು ಸೇರಿದಂತೆ ಇನ್ನಿತರರು ಇದ್ದರು.