ತುಮಕೂರು: ತುಮಕೂರು ಸ್ಮಾರ್ಟ್ಸಿಟಿ ಲಿ., ವತಿಯಿಂದ ಶಿವಕುಮಾರಸ್ವಾಮೀಜಿ ವೃತ್ತದಿಂದ ಕೋತಿತೋಪು ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಿರ್ಮಿಸಿರುವ ಮಳಿಗೆಗಳು ಉದ್ಘಾಟನೆಯಾಗಿವೆ.
ಸುಸಜ್ಜಿತವಾದ ಹಾಗೂ ನೈರ್ಮಲ್ಯಯುತ ಆಹಾರ ನೀಡಲು 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಆಹಾರ ಮಾರಾಟದ ಮಳಿಗೆಗಳನ್ನು ಗುರುವಾರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಉದ್ಘಾಟಿಸಿದರು.
ಆಹಾರ ಮಳಿಗೆಗಳ ಫಲಾನುಭವಿಗಳು ಮಳಿಗೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವ ಬೈರತಿ ಬಸವರಾಜು ತಿಳಿಸಿದರು. ರಾಜ್ಯದೆಲ್ಲೆಡೆ ಸ್ಮಾರ್ಟ್ಸಿಟಿ ಯೋಜನೆ ಶೇ.85 ಕಾಮಗಾರಿ ಪೂರ್ಣಗೊಂಡಿದ್ದು, ಬಸ್ಸ್ಟಾ$್ಯಂಡ್, ಕ್ರೀಡಾಂಗಣ ಮುಂತಾದ ದೊಡ್ಡ ಸಂಕೀರ್ಣಗಳ ಕಾಮಗಾರಿ ಹೊರತು ಪಡಿಸಿದರೆ, ಉಳಿದಂತೆ ವಿದ್ಯುತ್ ದೀಪ, ರಸ್ತೆ, ಮುಂತಾದ ಬಹುತೇಕ ಯೋಜನೆಗಳು ಪೂರ್ಣಗೊಂಡಿವೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪರಸರ ಸ್ನೇಹಿಯಾದ ಬೈಸಿಕಲ್ ಹಾಗೂ ಇ&ಬೈಕ್ ಯೋಜನೆಯಿಂದ ತುಮಕೂರು ನಾಗರಿಕರಿಗೆ ಅನುಕೂಲವಾಗಲಿದೆ, ಬಸ್ ಮತ್ತು ರೈಲ್ವೆ ನಿಲ್ದಾಣಕ್ಕೆ ಸಂಚರಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅತೀ ಕಡಿಮೆ ದರದಲ್ಲಿ ತೆರಳಲು ಇವು ನೆರವಾಗಲಿದೆ ಎಂದರು.
ಇ&ಬೈಕ್ ಸವಾರಿ ಉಪಯೋಗಿಸಲು ಬಯಸುವವರು ನಿಗದಿತ 15 ನಿಲ್ದಾಣಗಳಲ್ಲಿ ತಮ್ಮ ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ ನೀಡಿ ಹೆಸರನ್ನು ನೋಂದಾಯಿಸಬೇಕು. ಆನ್ಲೈನ್ ಅಪ್ಲಿಕೇಶನ್ನಲ್ಲಿ ಪೂರ್ವ ಪಾವತಿ ಮೂಲಕ ತಮಗೆ ಬೇಕಾದ ನಿಲ್ದಾಣದಿಂದ ಬೈಸಿಕಲ್ ಬೈಕ್ ಪಡೆದು ಉಪಯೋಗಿಸಬಹುದು ಎಂದರು. ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಸದಸ್ಯೆ ರೂಪಶ್ರೀ, ಶ್ರೀನಿವಾಸ್, ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ಇದ್ದರು.
ತುಮಕೂರು ನಾಗರಿಕರಿಗೆ ಅನುಕೂಲವಾಗುವಂತೆ ಪರಿಸರ ಸ್ನೇಹಿ ಬೈಸಿಕಲ್ ಹಾಗೂ ಇ&ಬೈಕ್ ಸವಾರಿಯ ಅವಕಾಶವನ್ನು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕಲ್ಪಿಸಲಾಗಿದೆ. ನಗರದಲ್ಲಿ 15 ಕಡೆ ನಿಲುಗಡೆ ಪ್ರದೇಶಗಳನ್ನು ಗುರುತಿಸಿ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 120 ಇ&ಬೈಕ್ ಹಾಗೂ 30 ಬೈಸಿಕಲ್ಗಳೊಂದಿಗೆ ಯೋಜನೆಯ ಅನುಷ್ಠಾನ ಕೈಗೊಂಡಿದೆ. > ಜಿ.ಬಿ.ಜ್ಯೋತಿಗಣೇಶ್ ಶಾಸಕ