ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿಯಲ್ಲಿರುವ ಐತಿಹಾಸಿಕ ಶ್ರೀ ಬಂಡೆ ರಂಗನಾಥಸ್ವಾಮಿ ದೇಗುಲ ಹಾಗೂ ಪಾಳುಬಿದ್ದ ಓಬಳಪ್ಪನ ಬಾವಿ ಸೇರಿದಂತೆ ಇತರ ವಿವಿಧ ಪ್ರದೇಶಗಳಿಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಐತಿಹಾಸಿಕ ಸ್ಮಾರಕಗಳನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಇವುಗಳ ಬಗ್ಗೆ ಮಾಹಿತಿ ನೀಡಬಹುದು. ಶಿಥಿಗೊಂಡಿರುವ ಓಬಳಪ್ಪನಬಾವಿ ಅಭಿವೃದ್ಧಿಗೆ 25 ಲಕ್ಷ ರೂ. ನೀಡಲಾಗುವುದು. ದೇಗುಲದ ಸಂಪೂರ್ಣ ಅಭಿವೃದ್ಧಿಯಾಗಬೇಕಿದೆ. ಎರಡು ಕಡೆ ವೀಕ್ಷಕ ಗೋಪುರಗಳ ನಿರ್ಮಾಣ ಕೂಡ ಆಗಬೇಕು. ಈ ಬಗ್ಗೆ ಗಮನಹರಿಸುವೆ ಎಂದು ತಿಳಿಸಿದರು.
ಬಂಡೆ ರಂಗನಾಥ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ, ಧರ್ಮಕರ್ತ ಭಾಸ್ಕರರಾವ್, ಖಜಾಂಚಿ ದೇವಿಪ್ರಸಾದ, ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್, ಪ್ರಮುಖರಾದ ಎಸ್.ವಿ.ಪಾಟೀಲ್, ರುದ್ರಪ್ಪ, ಎಸ್.ಕೆ.ಕೃಷ್ಣ, ಶಿವಪ್ರಸಾದ, ಸುರೇಶ್ ದಿಂಡಿ, ತಹಸೀಲ್ದಾರ್ ಆರ್.ಕವಿತಾ, ಆರ್.ಐ. ಕೊಟ್ರೇಶ, ಗ್ರಾಮಲೆಕ್ಕಾಧಿಕಾರಿ ವೇಮಕಾರೆಡ್ಡಿ ಮತ್ತಿತರರು ಇದ್ದರು.