ಜಿಲ್ಲೆ

ಸ್ಫೋಟಕ ಸಿಡಿದು ನಾಲ್ವರಿಗೆ ಗಾಯ

Hassan

ಗರೆ: ಹಂದಿ ಬೇಟೆಯಾಡಲು ಬಳಸುವ ಕಚ್ಚಾ ಸ್ಫೋಟಕ ಸಿಡಿದು ಐವರು ಗಾಯಗೊಂಡಿದ್ದಾರೆ.


ಹಗರೆ ಸಮೀಪದ ಅಂಗಡಿಹಳ್ಳಿ ಗ್ರಾಮದಲ್ಲಿ ಗ್ರಾಮದ ಮಂದಾಕಿನಿ, ಹಿರಿಯ ಮಗಳಾದ ರೋಜಾ ಹಾಗೂ ಆಕೆಯ 12 ತಿಂಗಳ ಮಗು, ಮತ್ತೊಬ್ಬ ಮಗಳು ಅಶ್ವಿನಿ ಗುಂಜಿ, ಮೊಮ್ಮಗಳು ಶಿವಾನ್ಯ ಗಾಯಗೊಂಡವರು.


ಗಾಯಾಳುಗಳ ಪಕ್ಕದ ಮನೆಯ ಗೌರೀಶ ಹಂದಿಗಳನ್ನು ಬೇಟೆಯಾಡಲು ಅಕ್ರಮವಾಗಿ ಸ್ಫೋಟಕಗಳನ್ನು ತಯಾರಿಸಿ ಮನೆಯ ಮೇಲೆ ಒಣಗಿ ಹಾಕಿದ್ದರು. ಭಾನುವಾರ ಮಧ್ಯಾಹ್ನ ಕಚ್ಚಾ ಸ್ಫೋಟದ ಉಂಡೆಗಳನ್ನು ಕಾಗೆ ಎಳೆದು ಬೀಳಿಸಿದೆ. ಈ ವೇಳೆ ಸ್ಫೋಟಕಗಳು ಮಂದಾಕಿನಿ ಅವರ ಮನೆಯ ಮೇಲೆ ಬಿದ್ದು ಸಿಡಿದ ಪರಿಣಾಮ ಮನೆಗೆ ಅಳವಡಿಸಿದ್ದ ಶೀಟ್‌ಗಳು ಚೆಲ್ಲಾಪಿಲ್ಲಿಯಾಗಿ ಹಾರಿ ಶೀಟ್‌ಗಳ ಚೂರುಗಳು ಮನೆಯಲ್ಲಿದ್ದ ಎಲ್ಲರ ದೇಹಕ್ಕೆ ಹೊಕ್ಕು ಗಾಯಗೊಂಡಿದ್ದಾರೆ.


ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೀರ್ತಿರಾಜ್ ಎಂಬುವರು ಹಳೇಬೀಡು ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.