ಜಿಲ್ಲೆ

ಸ್ಪೋಟಕ ವಸ್ತು ಸಾಗಿಸುತ್ತಿದ್ದವನ ಬಂಧನ

ಗದಗ: ಬೈಕ್​ನಲ್ಲಿ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದವನನ್ನು ಶಿರಹಟ್ಟಿ ಪೊಲೀಸರು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಮೋಕ್ಸಗುಂಡಮ್ಮನ ಮೂಲದ ಶಿವರಡ್ಡಿ ಸುಬ್ಬಾರಡ್ಡಿ ತಮ್ಮನೇನೆ ಬಂಧಿತ ಆರೋಪಿ. ಈತ ಮಾ.15 ರಂದು ತಾಲೂಕಿನ ಸೀತಾಲಹರಿ ಬಳಿಯ ಬೈಕ್​ನಲ್ಲಿ ಹೋಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಪಿಐ ವಿಕಾಸ ಲಮಾಣಿ ನೇತೃತ್ವದ ಸಿಬ್ಬಂದಿ ದಾಳಿ ನಡೆಸಿದೆ. ಬಂಧಿತನಿಂದ ಸುಮಾರು 23 ಸಾವಿರದ 370 ರೂಪಾಯಿ ಮೌಲ್ಯದ ಜಿಲಿಟಿನ್ ಕಡ್ಡಿ, ಎಲೆಕ್ಟ್ರಾನಿಕ್ ಡೆಟೋನೇಟರ್, ವಯರ್ ಹಾಗೂ ಸಾಗಾಟಕ್ಕೆ ಬಳಿಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಲ್ಲಿನ ಕ್ವಾರಿಯಲ್ಲಿ ಬಳಸುವ ಉದ್ದೇಶದಿಂದ ಸ್ಪೋಟಕ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕೋಡಿಯ ವಿನಯ ಟ್ರೇಡರ್ಸ್​ನಲ್ಲಿ ಈ ಸ್ಪೋಟಕಗಳನ್ನು ಖರೀದಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ವಿನಯ ಟ್ರೇಡರ್ಸ್ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.