ಜಿಲ್ಲೆ

ಸ್ಪರ್ಶ್ ಕುಷ್ಟರೋಗ ಅರಿವು ಆಂದೋಲನ

ಕೊಳ್ಳೇಗಾಲ: ತಾಲೂಕು ಅರೋಗ್ಯ ಇಲಾಖೆ ವತಿಯಿಂದ  ಪಟ್ಟ ಣದಲ್ಲಿ  ಶುಕ್ರವಾರ ಸ್ಪರ್ಶ್ ಕುಷ್ಟರೋಗ ಅರಿವು ಆಂ ದೋಲನ -2025 ಜಾಥಾವನ್ನು ನಡೆಸಲಾಯಿತು.
ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆವರ ಣದಲ್ಲಿ ಸ್ಪರ್ಶ್ ಕುಷ್ಟರೋಗ ಬಗೆಗಿನ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಹಾಗೂ ಡಿಎನ್ ಟಿ ತಂಡದ ಸದಸ್ಯ ಡಾ.ಚಂದ್ರಶೇಖರ್   ಚಾಲನೆ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿ ಗೋಪಾಲ್ , ನಗರ ಆರೋಗ್ಯ ಅಧಿಕಾರಿ ಡಾ. ನಾಗೇಂದ್ರ, ರೋಟರಿ ಸಂಸ್ಥೆ ಅಧ್ಯಕ್ಷೆ ಸರಸ್ವತಿ ಹೊನ್ನಪ್ಪ, ಪುಟ್ಟರಸಶೆಟ್ಟಿ, ಜೋಸೆಫ್ ಅಲೆಗ್ಸಾಂಡರ್, ಸರ್ಕಾರಿ ನೌಕರರ ಸಂಘದ ಸದಸ್ಯರು, ಆರೋಗ್ಯ ನಿರೀಕ್ಷರು, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಪಟ್ಟಣದ ಪ್ರ ಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳು ನಾಮಫ ಲಕ ಗಳನ್ನು ಹಿಡಿದು  ಕುಷ್ಟರೋಗದ ಬಗೆಗಿನ ತಪ್ಪು ಕಲ್ಪನೆಯನ್ನು‌ ಹೋಗಲಾಡಿಸೋಣ,ಕುಷ್ಟರೋಗ ದಿಂದ ಯಾರು ಬಾಧಿತರಾಗದಂತೆ ನೋಡಿಕೊಳ್ಳೋಣ ಎಂದು ಜಾಗೃತಿ ಮೂಡಿಸಿದರು.