ಭಾಲ್ಕಿಯ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳನ್ನು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಆಕಾಶ ರಿಕ್ಕೆ, ಅಕ್ಷಯ ಮುದ್ದಾ, ರವೀಂದ್ರ ಚಿಡಗುಪ್ಪೆ, ಗುಂಡಪ್ಪ ಸಂಗಮಕರ, ಮೋಹನ ರೆಡ್ಡಿ, ಬಾಬು ಬೆಲ್ದಾಳ ಇತರರಿದ್ದರು. 
ಜಿಲ್ಲೆ

ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ

ಭಾಲ್ಕಿ: ಸ್ಪರ್ಧೆಗಳಲ್ಲಿ ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಗೆದ್ದವರೂ ಹಿಗ್ಗದೆ ಸೋತವರೂ ಕುಗ್ಗದೆ ಈ ಎರಡನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.

ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ ೧೩೫ನೇ ಜಯಂತ್ಯುತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಶರಣರ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸ್ಪರ್ಧೆಗಳು ಇರಲಿ, ಗೆದ್ದರೆ ಅಭಿಮಾನ ಸಿಗುತ್ತದೆ. ಸೋತರೆ ಅನುಭವ ಸಿಗುತ್ತದೆ. ಹಾಗಾಗಿ ಸೋಲು-ಗೆಲುವು ಲೆಕ್ಕಿಸದೇ ಸ್ಪರ್ಧೆಗಳಲ್ಲಿ ನಿರಂತರವಾಗಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಈ ಸಮಾಜಕ್ಕೆ ಅಚ್ಚಳಿಯದಂತಹ ನೆನಪಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಬಸವಣ್ಣನವರ ಸಿದ್ಧಾಂತ, ಪಟ್ಟದ್ದೇವರ ತತ್ವ ಮುಂದಿನ ಜನಾಂಗಕ್ಕೆ ಮುಟ್ಟಿಸಲು ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲ ಮಕ್ಕಳು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಫರ್ಟಿಲೈಸರ್ ಅಸೋಷಿಯನ್ ಅಧ್ಯಕ್ಷ ಮಲ್ಲಿಕಾರ್ಜುನ ಚಾಕೋತೆ, ಕಿರಣಾ ಅಸೋಷಿಯನ್ ಅಧ್ಯಕ್ಷ ದಿಲೀಪಕುಮಾರ ಸುಂಟೆ, ಕಪಡಾ ಅಸೋಷಿಯನ್ ದ ಶಿವಕುಮಾರ ಕಲ್ಯಾಣೆ, ಪಿಕೆಪಿಎಸ್ ಸದಸ್ಯ ರಾಜಕುಮಾರ ಜಲ್ದೆ, ಯುವ ಮುಖಂಡ ಆಕಾಶ ರಿಕ್ಕೆ, ಚನ್ನಬಸವ ಮ್ಯಾರಥಾನ್ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಚಿಡಗುಪ್ಪೆ, ಸದ್ಗುರು ಶಾಲೆಯ ಅಧ್ಯಕ್ಷ ಅಕ್ಷಯ ಮುದ್ದಾ, ಆಡಳಿತಾಧಿಕಾರಿ ಮೋಹನ ರೆಡ್ಡಿ, ಸಂಗ್ರಾಮಪ್ಪ ಇಂಗಳೆ, ವೀರಣ್ಣ ಕುಂಬಾರ, ರಾಜಕುಮಾರ ಸಾಲಿ, ರಾಜು ಜುಬರೆ, ಗುಂಡಪ್ಪ ಸಂಗಮಕರ್, ಭಾರತಿ ಪ್ರಭುದೇವ ಕುಂಬಾರ ಇದ್ದರು.

ಬಾಬು ಬೆಲ್ದಾಳ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಣೆ ಮಾಡಿದರು. ಬಸವರಾಜ ಪ್ರಭಾ ವಂದಿಸಿದರು.