ಬಾಗಲಕೋಟೆ: ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ವಿವಿಧ ಹಂತಗಳಲ್ಲಿ ಅಭ್ಯಾಸ ಮಾಡಬಹುದಾಗಿದ್ದು, ಬಾಳಿನ ಬೆಳಕಿಗೆ ದೂರ ದೃಷ್ಟಿಕೋನವೆ ಉತ್ತಮ ತಂತ್ರ ಎಂದು ಉಪನ್ಯಾಸಕ ಮೋಹನ ದೇಶಪಾಂಡೆ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆ ಘಟಕ ೧ ಮತ್ತು ೨ ರ ವತಿಯಿಂದ ದತ್ತು ಗ್ರಾಮವಾದ ಮುಚಖಂಡಿಯಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮನಸನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ನಮ್ಮಲ್ಲೆ ಇರುತ್ತದೆ. ಅದನ್ನು ರೂಢಿಗತಗೊಳಿಸುವುದು ಸುಲಭವಲ್ಲ. ಆದರೆ ಸಾಧ್ಯವಾಗಿದೆ. ತಯಾರಿ ಹೇಗೆ, ಅದಕ್ಕಾಗಿ ನಾವು ಏನೆಲ್ಲಾ ಅವಿರತ ಪ್ರಯತ್ನ, ಶ್ರಮ ನಮ್ಮ ಬಾಳಿನ ಬೆಳಕಿಗೆ ದೂರ ದೃಷ್ಟಿ ಅಗತ್ಯವಾಗಿ ಬೇಕು ಎಂದರು.
ಎಸ್.ಆರ್.ಸಬರದ ಮಾತನಾಡಿ, ಸುವ್ಯವಸ್ಥಿತ ಜೀವನವನ್ನು ನಡೆಸುವುದು ಕಷ್ಟಸಾಧ್ಯ. ಆದರೆ ಅಸಾಧ್ಯವಾಗದ ಕಾರ್ಯ ಜಗತ್ತಿನಲ್ಲಿ ಯಾವುದು ಇಲ್ಲ. ಜೀವನವು ಒಂದು ತಪಸ್ಸಿನಂತೆ ಅದರ ಪ್ರತಿಫಲ ಬಯಸದೆ ಕಾರ್ಯ ನಿರ್ವಹಿಸಿದರೆ ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸುನ್ನು ಗಳಿಸಬಹುದಾಗಿದೆ ಎಂದು ತಿಳಿಸಿದರು.
ಡಾ.ಎಲ್.ಎಂ.ಭೋವಿ, ಡಾ. ಮಾಧವರಾವ್ ಕುಲಕರ್ಣಿ, ಯಂಕಣ್ಣ ಮುಧೋಳ,ಶಿವಕುಮಾರ, ಸಾಗರ ಅಥಣಿ, ಮಹಿಮಾ ದೇಶಪಾಂಡೆ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಿವಾನಂದಶಿವನಗುತ್ತಿ, ಶ್ರೀಕಾಂತ ಬಸವನಾಳ, ಶಿಬಿರಾಧಿಕಾರಿ ಎಸ್.ಕೆ.ಜಾಗೀರದಾರ, ಲಕ್ಷ್ಮೀ ಮುತ್ತಪ್ಪನವರ ಇದ್ದರು.