ಬಾಗಲಕೋಟೆ: ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನೀಯರಿಗೆ ಉಚಿತ ಕೆ.ಎ.ಎಸ್., ಐಎಎಸ್ ಮತ್ತು ಪಿ.ಎಸ್.ಐ. ಪರೀಕ್ಷೆಯ ತರಬೇತಿ ನೀಡಲು ವೀಣಾ ವಿ. ಕಾಶಪ್ಪನವರ ಫೌಂಡೇಷನ್ ಸ್ಥಾಪಿಸಲಾಗಿದೆ. ನಿತಂತರವಾಗಿ ಆಯ್ದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ ಎಂದು ಫೌಂಡೇಷನ್ ಅಧ್ಯಕ್ಷೆ, ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ನಗರದ ಪ್ರೇಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಜನ್ಮದಿನದ ಅಂಗವಾಗಿ ಈ ಫೌಂಡೇಷನ್‌ನ್ನು ಅಸ್ತಿತ್ವಕ್ಕೆ ಬಂದಿದ್ದು ೧೦೦ ವಿದ್ಯಾರ್ಥಿಗಳಿಗೆ ಉಚಿತ ಕೆ.ಎ.ಎಸ್. ಮತ್ತು ಪಿ.ಎಸ್.ಐ. ಪರೀಕ್ಷೆಯ ವಸತಿ ರಹಿತ ತರಬೇತಿಯನ್ನು ವಿಜಯಪುರದ ಎಸ್‌ಬಿ ವ್ಹಿಜಡಮ ಜಂಟಿ ಸಹಯೋಗದೊಂದಿಗೆ ನೀಡಲಾಗುತ್ತಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಬಡ, ಮಧ್ಯಮ ವರ್ಗದ ಹಿತದೃಷ್ಠಿಯಿಂದ ಈ ಫೌಂಡೇಷನ್‌ನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಬಾಗಲಕೋಟೆಯ ಕೇಂದ್ರಗಳಲ್ಲಿ ೧೦೦ ಅಂಕಗಳ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ತರಬೇತಿಗೆ ನೋಂದಣಿ ಮಾಡಲು ಅವಕಾಶವಿದೆ. ಅ. ೧೫ ರಿಂದ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಸೆಪ್ಟೆಂಬರ್ ೧೪ ರಿಂದ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಸೆ.೩೦ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆನ್‌ಲೈನ್ ಮೂಲಕವು ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ತರಬೇತಿಯ ಪ್ರವೇಶ ಪರೀಕ್ಷೆಗೆ ನೋಂದಣಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ. ೬೩೬೨೨೩೪೩೦೧, ೮೯೦೪೬೨೪೪೪೧ ನ್ನು ಸಂಪರ್ಕಿಸಲು ವೀಣಾ ಕಾಶಪ್ಪನವರ ತಿಳಿಸಿದರು.