ಚಿತ್ರದುರ್ಗ: ನಾನು ಕೂಡ ನಗರದ ಎಸ್‌ಜೆಎಂ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದೆ ಎಂದು ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಹಳೇ ವಿದ್ಯಾರ್ಥಿಗಳ ಸ್ನೇಹಸಮ್ಮಿಲನ ಮತ್ತು ಗುರುವಂದನಾ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,ಕಾಲೇಜಿನಲ್ಲಿ ಪಾಠ-ಪ್ರವಚನ,ಪ್ರಾಧ್ಯಾಪಕರ ಮಾರ್ಗದರ್ಶನ ಉತ್ತಮವಾಗಿದೆ. ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಅಗತ್ಯ ಸೌಲಭ್ಯವುಳ್ಳ ಜಯದೇವ ಸಭಾಭವನ ನಿರ್ಮಾಣಗೊಂಡಿರುವುದು ಅನುಕರ ಣೀಯ.
ಸ್ಮರಣ ಸಂಚಿಕೆ ಪ್ರಕಟಣೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಕೋಚಿಂಗ್ ಸೆಂಟರ್ ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ನೆರವಾಗುವಂತೆ ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಶ್ರೀಗಳು ಸಲಹೆ ನೀಡಿದರು. ಮುಖ್ಯಅತಿಥಿ ಕೆಇಬಿ ಷಣ್ಮುಖಪ್ಪ ಮಾತನಾಡಿ,ಈ ಕಾ ಲೇಜು ನನಗೆ ಅಕ್ಷರದಾನ ನೀಡಿದೆ. ಪಾಠಶಾಲೆ ಮೂಲಕ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಯಲು ಸಾಧ್ಯವೆಂದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಡಾ.ಹನುಮಲಿ ಷಣ್ಮುಖಪ್ಪ,ಪಟೇಲ್‌ಶಿವಕುಮಾರ್,ಎಸ್.ಹಾಲಪ್ಪ, ಕೆ.ಒ.ಮಂಜುನಾಥ್,ಡಾ. ಎಸ್. ಎಚ್.ಜಯಣ್ಣ,ಕೆ.ಎಸ್.ಸತೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ‌್ಯ ಮತ್ತು ಗುರುವೃಂದ ಹಳೆಯ ವಿದ್ಯಾರ್ಥಿಗಳು ಗೌ ರವಿಸಿದರು. ಪ್ರೊ.ಎಚ್.ಕೆ.ಶಿವಪ್ಪ, ಡಾ.ಹರ್ಷವರ್ಧನ್,ಎಚ್.ಎಂ.ಮಂಜುನಾಥಸ್ವಾಮಿ ಮತ್ತಿತರರು ಇದ್ದರು.
ಪ್ರಾಚಾರ‌್ಯ ಡಾ.ಕೆ.ಸಿ.ರಮೇ ಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯ ಪ್ರಾರ್ಥಿಸಿ,ಸಂಘದ ಕಾರ‌್ಯದರ್ಶಿ ಪ್ರೊ.ಎಲ್.ಶ್ರೀನಿವಾಸ್ ವಂದಿಸಿದರು. ಪ್ರೊ.ಆರ್.ಕೆ.ಕೇದಾರ ನಾಥ್ ನಿರೂಪಿಸಿದರು.