ಕಲಬುರಗಿ: ಕಳೆದ ೧೧ ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಯಶಸ್ವಿಯಾಗಿ ಉದ್ಯೋಗ ಒದಗಿಸುತ್ತಿರುವ ಬ್ರೆÊಟ್ ಸೊಲ್ಯೂಷನ್ಸ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯೂ ನಗರದಲ್ಲೂ ಆರಂಭಿಸುತ್ತಿದ್ದು, ಫೆ.೨೨, ೨೩ರಂದು ಎರಡು ದಿನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಅಶೋಕ ಹೆಗ್ಗಡೆ ತಿಳಿಸಿದರು.
ಸಂಸ್ಥೆಯೂ ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿAಗ್, ಎಸ್‌ಎಸ್‌ಸಿ, ಆರ್‌ಆರ್‌ಬಿ ಮತ್ತು ವಿಮಾ ಇಲಾಖೆಯ ಉದ್ಯೋಗ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ, ಪ್ರವೇಶ ಆಧಾರಿತ ಪರೀಕ್ಷೆಗಳಾದ ಕ್ಯಾಟ್, ಮ್ಯಾಟ್, ಸಿಮ್ಯಾಟ್, ಪಿಜಿಸಿಇಟಿ ತರಬೇತಿಯನ್ನು ನೀಡುವಲ್ಲಿ ಪರಿಣಿತಿ ಹೊಂದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ದೂರದ ಧಾರವಾಡ, ಬೆಂಗಳೂರು, ಹೈದರಾಬಾದ್‌ಗೆ ತರಬೇತಿಗೆ ಹೋಗುತ್ತಿದ್ದು, ಅದನ್ನು ತಪ್ಪಿಸಿ, ನಗರದಲ್ಲಿಯೇ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಲು ಮುಂದಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ನಗರದ ಟೊಯೋಟಾ ಶೋರೂಮ್ ಪಕ್ಕದಲ್ಲಿರುವ ಖರ್ಗೆ ವೃತ್ತದ ಸಮೀಪದ ಎಚ್‌ಡಿಎಫ್‌ಸಿ ಬ್ಯಾಂಕ್ ಮೇಲಿನ ಕಟ್ಟಡದಲ್ಲಿ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಡಾ.ಕೇಶ ಬಿರಾದಾರ ಮಾತನಾಡಿ, ನಮ್ಮ ಭಾಗದ ಸ್ಪರ್ಧಾಕಾಂಕ್ಷಿಗಳು ಹೈದರಾಬಾದ್, ಬೆಂಗಳೂರಿಗೆ ಹೋಗುವುದು ತಡೆಯಲು ಬೆಂಗಳೂರಿನ ಬ್ರೆÊಟ್ ಸಂಸ್ಥೆಯ ಸಹಕಾರದಲ್ಲಿ ತರಬೇತಿ ಆರಂಭಿಸಲಾಗುತ್ತಿದೆ. ಅತ್ಯುತ್ತಮ ಅನುಭವಿ, ಪರಿಣಿತ ಬೋಧಕರ ತಂಡ, ಅಧ್ಯಯನ ಸಾಮಗ್ರಿ ನೀಡುತ್ತಾರೆ ಎಂಬ ವಿಶ್ವಾಸ ಮೂಡಿಸಿದ್ದಾರೆ. ಮಾಹಿತಿಗೆ ೭೨೦೫೯೦೨೮೯೮೩, ೭೨೦೫೯೦೨೮೯೮೯, ೭೨೦೫೯೦೨೮೯೮೮ ಸಂಪರ್ಕಿಸಬೇಕು ಎಂದು ತಿಳಿಸಿದರು.
ಎಂಡಿ ನಂದಕಿಶೋರ, ಕೃಷ್ಣಮೂರ್ತಿ ಇದ್ದರು.