ಚಿಕ್ಕಮಗಳೂರಿನ ಕಾಮಧೇನು ದೇವಸ್ಥಾನದಲ್ಲಿ ಸುಮಾರು ೨೦ ವರ್ಷಗಳಿಂದ ನಿತ್ಯ ದೇವಸ್ಥಾನದ ಸೇವೆ ಮಾಡಿಕೊಂಡು ಬರುತ್ತಿರುವ ಸಹಾಯಕ ಅರ್ಚಕರಾದ ರಾಘವೇಂದ್ರ ಅವರ ಚಿಕಿತ್ಸೆಗೆ ಶ್ರೀ ದೇವೀರಮ್ಮ ಸ್ಪಂದನ ಬಳಗದ ಗೆಳತಿಯರು ಆರ್ಥಿಕ ಸಹಾಯ ಮಾಡಿದರು. 
ಜಿಲ್ಲೆ

ಸ್ಪಂದನ ಬಳಗದಿಂದ ಆರ್ಥಿಕ ನೆರವು

ಚಿಕ್ಕಮಗಳೂರು: ನಗರದ ಕಾಮಧೇನು ದೇವಸ್ಥಾನದಲ್ಲಿ ಸುಮಾರು ೨೦ ವರ್ಷಗಳಿಂದ ನಿತ್ಯ ದೇವಸ್ಥಾನದ ಸೇವೆ ಮಾಡಿಕೊಂಡು ಬರುತ್ತಿರುವ ಸಹಾಯಕ ಅರ್ಚಕರಾದ ರಾಘವೇಂದ್ರ ರವರು ಅತೀ ರಕ್ತಹೀನತೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಬಸವನಗುಡಿ ಶಂಕರ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಶ್ರೀದೇವಿರಮ್ಮ ಸ್ಪಂದನ ಬಳಗದಿಂದ ಆರ್ಥಿಕ ನೆರವು ಒದಗಿಸಲಾಗಿದೆ.

ರಾಘವೇಂದ್ರ ಅವರ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಅವರ ಪತ್ನಿ ಮತ್ತು ತಾಯಿ ಕಂಗಾಲಾಗಿದ್ದರು. ಇದನ್ನು ಅರಿತ ಶ್ರೀ ದೇವಿರಮ್ಮ ಸ್ಪಂದನ ಬಳಗದ ಗೆಳತಿಯರು ನವೆಂಬರ್ ತಿಂಗಳಿನಲ್ಲಿ ೧೬ ಸಾವಿರ ರೂಪಾಯಿ ಹಣ ನೀಡಿ ಸಹಕರಿಸಿದ್ದಾರೆ. ಇದು ಸ್ಪಂದನ ಬಳಗದ ೮ನೇ ಸ್ಪಂದನೆಯಾಗಿದೆ. ಈ ಸಂದರ್ಭದಲ್ಲಿ ರೀನಾ ಸುಜೇಂದ್ರ, ಕಲಾವತಿ ಉಡುಪ, ಪ್ರನೂಪ ನಾಗರಾಜ್, ಚೈತ್ರಗೌಡ ಉಪಸ್ಥಿತರಿದ್ದರು.