ಕಲಬರಗಿ: ಸ್ನೇಹಿತರು ಕೂಡಿ ಸ್ನೇಹಿತನ ಮನೆಯಲ್ಲಿಯೇ ಪರ‍್ಟಿ ಮಾಡಿ ಆತನನ್ನೆ ರ‍್ಬರವಾಗಿ ಕೊಲೆಗೈದ ಟನೆ ನಗರದ ಕುಷ್ಟರೋಗಿಗಳ ಕಾಲನಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು, ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಚಾಂದ್ಸಾಬ್ (೩೮) ಕೊಲೆಗೀಡಾದ ವ್ಯಕ್ತಿ.
ಕುಷ್ಟರೋಗಿಗಳ ಕಾಲನಿಯಲ್ಲಿ ಒಬ್ಬನೇ ವಾಸಿಸುತ್ತಿದ್ದ ಚಾಂದ್ಸಾಬ್ ಪೇಟಿಂಗ್ ಕೆಲಸ ಮಾಡುತ್ತಿದ್ದ. ಶುಕ್ರವಾರ ತನ್ನ ಮನೆಯಲ್ಲಿಯೇ ಸ್ನೇಹಿತರೊಂದಿಗೆ ಪರ‍್ಟಿ ಮಾಡಿದ್ದು, ಯಾವುದೋ ದ್ವೇಷಕ್ಕೆ ಬಟ್ಟೆ ಬಿಚ್ಚಿ, ಕಟ್ಟಿಗೆಯಿಂದ ಹೊಡೆದು ರ‍್ಬರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ. ಮೃತನ ಪತ್ನಿ, ಮಕ್ಕಳು ದೆಹಲಿಯಲ್ಲಿ ವಾಸ ಮಾಡುತ್ತಿದ್ದರಿಂದ ಚಾಂದ್ಸಾಬ್ ಒಬ್ಬನೇ ಇಲ್ಲಿ ವಾಸಿಸುತ್ತಿದ್ದ. ಆರ್ಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಪಿಐ ಕುಬೇರ ರಾಯಮಾನೆ ಇತರರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.