ಜಿಲ್ಲೆ

ಸ್ಥಿತಿ ಗಂಭೀರ, ಇನ್ನಾದರೂ ಉಡಾಫೆ ಬಿಟ್ಟು ಜೀವ ಉಳಿಸಿಕೊಳ್ಳಿ!

ಬೆಂಗಳೂರು: ಕರ್ನಾಟಕದೆಲ್ಲೆಡೆ ಹಬ್ಬುತ್ತಿರುವ ಕರೊನಾ ಸೋಂಕು 3ನೇ ಹಂತವಾದ ಸಮುದಾಯಕ್ಕೆ ಹರಡುವ ಆತಂಕ ಶುರುವಾಗಿದೆ. ದಿನನಿತ್ಯ 1ರಿಂದ 2ರಂತೆ ಪತ್ತೆಯಾಗುತ್ತಿದ್ದ ಪ್ರಕರಣಗಳು ಈಗ 8,9ಕ್ಕೆ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ಜನರನ್ನು ಮನೆಯಿಂದ ಹೊರಗೆ ಬರದಂತೆ ಮಾಡಲು ಮತ್ತಷ್ಟು ಬಿಗಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಕರೊನಾದಿಂದಾಗಿ ಮೂವರು ಸಾವಿಗೀಡಾಗಿದ್ದರೆ, ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಜನತೆ ಉಡಾಫೆ ಬಿಟ್ಟು ಮನೆಯಲ್ಲಿದ್ದರಷ್ಟೇ ಈ ಮಹಾಮಾರಿಗೆ ಅಂಕೆ ಹಾಕಬಹುದಾಗಿದೆ. ಕರೊನಾ ಮಟ್ಟಹಾಕಲು ಹಾಗೂ ಸೋಂಕನ್ನು ನಿಯಂತ್ರಿಸಲು ಏನು ಮಾಡಬೇಕೆಂಬ ಬಗ್ಗೆ ಇಲ್ಲಿವೆ ಒಂದಷ್ಟು ಮಾಹಿತಿ.

ಸ್ವಚ್ಛತೆ ಇರಲಿ

  • ಸ್ಯಾನಿಟೈಸರ್ ಬಳಸಿ, ಸೋಪಿನಿಂದ 20 ಸೆಕೆಂಡುಗಳ ಕಾಲ ಕೈ ತೊಳೆಯಿರಿ
  • ಕೈ ತೊಳೆಯದೆ ಮುಖ, ಮೂಗು ಅಥವಾ ಬಾಯಿಯನ್ನು ಮುಟ್ಟಲೇಬೇಡಿ
  • ಹೆಚ್ಚು ಜನರು ರ್ಸ³ಸುವ ಬಾಗಿಲು ಹ್ಯಾಂಡಲ್, ಟೇಬಲ್ ಇತ್ಯಾದಿ ಮುಟ್ಟುವಾಗ ಹುಷಾರು

ಜನರೇನು ಮಾಡಬೇಕು?

  • ತುರ್ತ ಅಗತ್ಯ ಹೊರತುಪಡಿಸಿ ಮನೆಯಿಂದ ಹೊರಬರಬೇಡಿ
  • ಹೋಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳಿಗೂ ಈ ನಿಯಮ ಅನ್ವಯ
  • ಕ್ವಾರಂಟೈನ್ ವ್ಯಕ್ತಿಗಳು ಹೊರಗೆ ಓಡಾಡಿದರೆ ಪೊಲೀಸರಿಗೆ ಮಾಹಿತಿ ಕೊಡಿ ್ಝಮೀಪದ ಅಂಗಡಿಯಿಂದಲೇ ವಸ್ತು ಖರೀದಿಸಿ, ಹತ್ತತ್ತಿರ ಕ್ಯೂ ನಿಲ್ಲಬೇಡಿ
  • ಮುಖಕ್ಕೆ ಮಾಸ್ಕ್ ಧರಿಸಿ, ಯಾರನ್ನೂ ಮುಟ್ಟಬೇಡಿ, ಕನಿಷ್ಠ 3 ಅಡಿ ಅಂತರವಿರಲಿ ್ಝೕನುವಾಗ ಅಥವಾ ಕೆಮ್ಮುವಾಗ ಕರವಸ್ತ್ರ, ಟಿಶ್ಯು ಪೇಪರ್ ಅಡ್ಡವಾಗಿಟ್ಟುಕೊಳ್ಳಿ
  • ಫ್ಲಿಫ್​ಕಾರ್ಟ್, ಅಮೇಜಾನ್​ನಂಥ ಆನ್​ಲೈನ್ ಸೇವೆ ಬಳಸಿಕೊಳ್ಳಿ
  • ಸಾಮಾಜಿಕ ಜಾಲತಾಣಗಳಲ್ಲಿ ವೃಥಾ ವದಂತಿ ಹಬ್ಬಿಸಿ ಆತಂಕ ಸೃಷ್ಟಿಸಬೇಡಿ
  • ರಸ್ತೆಗಳಲ್ಲಿ ಸುಮ್ಮನೆ ಓಡಾಡುವುದು, ಗುಂಪುಗೂಡುವುದು ಬೇಡ ್ಝರಿಗೆ, ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗುವ ಆಲೋಚನೆ ಬೇಡ

ವೈರಸ್ ಹೇಗೆ ಹರಡುತ್ತೆ?

  • ಸೋಂಕು ತಗುಲಿರುವ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಗಾಳಿಯಿಂದ ಹರಡುತ್ತದೆ
  • ದೈಹಿಕ ಸಂಪರ್ಕದಿಂದ, ಅಂದರೆ ದೇಹ ಮುಟ್ಟುವುದರಿಂದ, ಹಸ್ತಲಾಘವ
  • ಸೋಂಕು ಇರುವ ವಸ್ತು ಮುಟ್ಟಿ ಬಾಯಿ, ಮೂಗು, ಕಣ್ಣುಗಳನ್ನು ರ್ಸ³ಸಿದರೆ