ಜಿಲ್ಲೆ

ಸ್ಥಳೀಯರಿಗೆ ಟಿಕೆಟ್ ನೀಡಿ

ಚಿತ್ರದುರ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ದಲಿತಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಒತ್ತಾಯಿಸಿದರು.

ಬುಧವಾರ ನಡೆದ ಸಭೆಯಲ್ಲಿ ದಲಿತ ಮುಖಂಡ ದುರುಗೇಶಪ್ಪ ಮಾತನಾಡಿ, ಎಲ್ಲಾ ರಾಷ್ಟ್ರೀಯ ಪಕ್ಷಗಳು ಜಿಲ್ಲೆಯ ಮತದಾರರನ್ನು ಕೇವಲವಾಗಿ ಕಾಣುತ್ತಿವೆ. ಹೊರಗಿನ ಹಣವಂತರಿಗೆ ಮನ್ನಣೆ ನೀಡಿ ಸ್ಥಳೀಯರನ್ನು ಕಡೆಗಣಿಸಿವೆ. ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯರಿಗೆ ನೀಡದಿದ್ದರೆ, ತಕ್ಕ ಪಾಠ ಸಮುದಾಯ ಕಲಿಸಲಿದೆ ಎಂದು ಎಚ್ಚರಿಸಿದರು.

ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಡಾ.ಬಿ.ಪ್ರಕಾಶ್ ಬೀರಾವರ ಮಾತನಾಡಿ, ಸ್ಥಳೀಯರಾದ ಡಾ.ಬಿ.ತಿಪ್ಪೇಸ್ವಾಮಿ ಅವರನ್ನು ಕಾಂಗ್ರೆಸ್ ನಾಯಕರು ಕಡೆಗಣಿಸಿದ ಪರಿಣಾಮ ಹೊರಗಿನವರು ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಸಿ.ತಿಪ್ಪೇಸ್ವಾಮಿ, ಕೆ.ರಾಮಚಂದ್ರ, ತಿಪ್ಪೇಸ್ವಾಮಿ, ಕುಂಚಿಗನಹಾಳ್ ಮಹಲಿಂಗಪ್ಪ, ಮಹಂತೇಶ್, ತಿಪ್ಪೇಸ್ವಾಮಿ, ಗಣೇಶ್, ಚೌಳೂರು ಪ್ರಕಾಶ್ ಇತರರಿದ್ದರು.