ಜಿಲ್ಲೆ

ಸ್ಥಳೀಯರಿಗೆ ಉದ್ಯೋಗ ಕೊಡದಿದ್ದರೆ ಹೇಗೆ?

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಜಿಲ್ಲೆ ಗಣಿ ಸಂಪತ್ತು ಬಳಸಿ ವಹಿವಾಟು ನಡೆಸುತ್ತಿರುವ ಖಾಸಗಿ ಗಣಿ ಕಂಪನಿಗಳು ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕೆಂದು ಸಂ ಸದ ಗೋವಿಂದ ಎಂ.ಕಾರಜೋಳ ಹೇಳಿದರು. ನಗರದ ಡಿಸಿ ಕಚೇರಿಯಲ್ಲಿ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಗಣಿಗಾರಿಕೆಗೆ ಗುತ್ತಿಗೆ ಪಡೆದಿರುವ 8 ಪ್ರಮುಖ ಖಾಸಗಿ ಕಂಪನಿಗಳ ಪೈಕಿ 5 ಕಂಪನಿಗಳು ಕಾರ‌್ಯನಿರ್ವಹಿಸುತ್ತಿವೆ. ಗಣಿ ಸಂಪತ್ತು ಬಳಸಿ ಲಾಭಗಳಿಸುತ್ತಿರುವ ಕಂಪನಿಗಳು ಜಿಲ್ಲೆ ಅಭಿವೃದ್ಧಿಗೆ ಕೊಡುಗೆ ನೀಡುವುದು ಅಗತ್ಯವಿದೆ.
ಗುತ್ತಿಗೆ ನೀಡುವ ಸಂದರ್ಭದಲ್ಲೇ ಪ್ರದೇಶಾಭಿವೃದ್ಧಿಗೆ ನಿಬಂಧನೆ ವಿಧಿಸಲಾಗುತ್ತದೆ. ಭೂಮಿ,ವಿದ್ಯುತ್,ರಸ್ತೆ, ಮೂಲ ಸೌಕರ್ಯಗಳ ನ್ನು ಬಳಸಿ ಗಣಿಗಾರಿಕೆ ನಡೆಸುವ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಹೇಗೆಂದು ಗರಂ ಆಗಿ ಪ್ರಶ್ನಿಸಿದ ಸಂಸದರು, ಉ ದ್ಯೋಗ ಅರಸಿ ಸಾವಿರಾರು ಜನರು ಪರಸ್ಥಳಗಳಿಗೆ ಗುಳೇ ಹೋಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆ ಸಂಪತ್ತು ಜನರಿಗೆ ಉಪಯೋಗವಾಗ ಬೇಕು. ಗಣಿ ಕಂಪನಿಗಳು ರಾಜ್ಯಬೊಕ್ಕಸಕ್ಕೆ ತೆರಿಗೆ ನೀಡಿದರೆ ಸಾಲದು. ಸ್ಥಳೀಯ ಜನರ ಅಭಿವೃದ್ಧಿಗೂ ನೆರವಾಗಬೇಕು. ಗಣಿ ಬಾಧಿತ ಪ್ರದೇಶಾಭಿವೃದ್ಧಿಗೂ ಕಾನೂನು ರೂಪಿಸಲಾಗಿದೆ. ಗಣಿಗಾರಿಕೆಯಿಂದಾಗುವ ಪ್ರಕೃತಿ ಹಾನಿ ನಿಯಂತ್ರಿಸಲು ಕಂಪನಿಗಳು ಸರಿಯಾಗಿ ಕೆಲಸ ಮಾಡಬೇಕು. ಸಿಎಸ್‌ಆರ್ ನಿಧಿಯಡಿ ಸಂಗ್ರಹವಾದ ಹಣ,ಅದನ್ನು ಎಲ್ಲೆಲ್ಲಿ ಬಳಸಲಾಗಿ ದೆ? ಕುಡಿಯುವ ನೀರು,ಶಾಲಾ,ಕಾಲೇಜು,ರಸ್ತೆ,ಕೆರೆ-ಕಟ್ಟೆಗಳ ನಿರ್ಮಾಣಕ್ಕೆ ಕಂಪನಿಗಳು ಕೊಡುಗೆ ನೀಡಬೇಕಿದೆ ಎಂದರು.
ತೆರಿಗೆ ಭರ್ತಿಯೊಂದಿಗೆ ಸಿಎಸ್‌ಆರ್ ನಿಧಿ ಬಳಕೆ ಕುರಿತು ನಿಗಾ ವಹಿಸಬೇಕು. ಮುಂದಿನ ಸಭೆಗೆ ಗಣಿ ಕಂಪನಿಗಳ ಮುಖ್ಯಸ್ಥರು ಸಿ ಎಸ್‌ಆರ್ ನಿಧಿ ಬಳಕೆಯ ಸಂಪೂರ್ಣ ಮಾಹಿತಿಯೊಂದಿಗೆ ತಪ್ಪದೇ ಭಾಗವಹಿಸುವಂತೆ ಸೂಚಿಸುವಂತೆ ಅಧಿಕಾರಿಗಳಿಗೆ ಸಂಸದರು ತಾ ಕೀತು ಮಾಡಿದರು.
ಕೆಎಂಇಆರ್‌ಸಿ ಅಡಿ ಜಿಲ್ಲೆಗೆ ಲಭ್ಯವಾಗಿರುವ 3792 ಕೋಟಿ ರೂ.ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗಣಿ ಬಾಧಿತ ಹಾಗೂ ಇತರೆ ಪ್ರದೇಶಾಭಿವೃದ್ಧಿಗೆ ಒತ್ತು ನೀಡ ಬೇಕು. ಪರಿಸರ ಪುನರ್‌ಸ್ಥಾಪನೆಗೆ 555.64 ಕೋಟಿ ರೂ.,ಕೃಷಿ ಆಧಾರಿತ ಚಟುವಟಿಕೆಗೆ 391.04,ಕುಡಿಯುವ ನೀರು,ನೈರ್ಮಲ್ಯ,ಗ್ರಾಮೀಣ ರಸ್ತೆ 978.68,ಆರೋಗ್ಯ 255.94,ಶಿಕ್ಷಣ 330.58, ವಸತಿ 106.88,ರಸ್ತೆ ಹಾಗೂ ಸಂಪರ್ಕ 620.2 ಹಾಗೂ ನೀರಾವರಿ 154.70 ಕೋಟಿ ರೂ.ಸೇರಿದಂತೆ ಅಭಿವೃದ್ಧಿ ಚಟುವಟಿಕೆಗಳಿಗೆ 3792. 30 ಕೋಟಿ ರೂ.ಹಂಚಿಕೆ ಯಾಗಿದೆ. ಇದ ಕ್ರಿಯಾಯೋಜನೆಯನ್ನು ಮುಂದಿನ ಸಭೆಯಲ್ಲಿ ಮಂಡಿಸ ಬೇಕು. ಬದಲಾವಣೆಗಳಿದ್ದರೆ ಕ್ರಮ ವಹಿಸಬೇಕೆಂದರು.
ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಜಿಲ್ಲೆಯ ಕುರಿತು ಚರ್ಚಿಸಿದ್ದೇನೆ. ಅ ವರ ಸಮ್ಮುಖದಲ್ಲಿಯೇ ಎಲ್ಲ ಗಣಿ ಕಂಪನಿಗಳ ಮುಖ್ಯಸ್ಥರ,ಅಧಿಕಾರಿಗಳ ಸಭೆ ನಡೆಸಲಾಗುವುದೆಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,ಗಣಿ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ.ಮಹೇಶ್,ಹಿರಿಯ ಭೂವಿಜ್ಞಾನಿ ನಾಗೇಂದ್ರಪ್ಪ ಮತ್ತಿರರು ಇದ್ದರು.