ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾ ಸಂಚಾಲಕ ಕೆ.ಜಿ.ವಿರೇಶ, ಪದಾಕಾರಿಗಳಾದ ಚಂದ್ರರಾಮುಲು, ಶ್ರೀನಿವಾಸ ವಡ್ಡೆಪಲ್ಲಿ, ಬುಡದಿ ರಂಗಪ್ಪ, ನಾಗಪ್ಪ ಮಾಮಿಡಿದೊಡ್ಡಿ, ತಿಮ್ಮಪ್ಪ ಕೋರ್ವಿಹಾಳ, ರಂಗನಗೌಡ ಕೊತ್ತದೊಡ್ಡಿ ಇದ್ದರು. 
ಜಿಲ್ಲೆ

ಸ್ಥಳೀಯ ಸಂಸ್ಥೆಗಳಲ್ಲಿ ಮಸಣ ಕಾರ್ಮಿಕರನ್ನು ನೇಮಿಸಿ

ರಾಯಚೂರು: ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರೆಂದು ಪರಿಗಣಿಸ ಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸಾರ್ವಜನಿಕ ಸ್ಮಶಾನಕ್ಕೆ ಮಸಣ ನಿರ್ವಾಹಕ ನೌಕರರನ್ನು ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾ.ಪಂ.ಗಳಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಮಶಾನಗಳಲ್ಲಿ ಪಾರಂಪರಿಕವಾಗಿ ಕಾರ್ಯನಿರ್ವಹಿಸುವ ಮಸಣ ಕಾರ್ಮಿಕರ ಹಾಗೂ ಅವರ ಕುಟುಂಬಗಳ ಸದಸ್ಯರ ಗಣತಿ ಮಾಡಬೇಕು. ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವೆಂದು ಪರಿಗಣಿಸಬೇಕು.
ಕುಣಿ ಅಗೆಯುವ ಮತ್ತು ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮುಖಾಂತರ ಕನಿಷ್ಠ 3 ಸಾವಿರ ರೂ. ಕೂಲಿ ಒದಗಿಸುವಂತೆ ಕ್ರಮಕೈಗೊಳ್ಳಬೇಕು. 45 ವರ್ಷದ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ 3 ಸಾವಿರ ರೂ. ಘೋಷಿಸಬೇಕು.
ಬುರ್ದಿಪಾಡ, ಹೆಗ್ಗಸನಹಳ್ಳಿ ಗ್ರಾಮಗಳಿಗೆ ಸಾರ್ವಜನಿಕ ರುದ್ರಭೂಮಿ ಮಂಜೂರು ಮಾಡಬೇಕು. ನಾಗನದೊಡ್ಡಿ, ಕೋರ್ವಿಹಾಳ ಗ್ರಾಮಗಳ ಸಾರ್ವಜನಿಕ ರುದ್ರಭೂಮಿಗಳನ್ನು ಸಮತಟ್ಟು ಮಾಡಬೇಕು. ಮಸಣ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು.
ಮಸಣ ಕಾರ್ಮಿಕರಿಗೆ ಐದು ಎಕರೆ ನೀರಾವರಿ ಜಮೀನು ಮಂಜೂರು ಮಾಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳಲ್ಲಿ ಮತ್ತು ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಕೆ.ಜಿ.ವಿರೇಶ, ಪದಾಕಾರಿಗಳಾದ ಚಂದ್ರರಾಮುಲು, ಶ್ರೀನಿವಾಸ ವಡ್ಡೆಪಲ್ಲಿ, ಬುಡದಿ ರಂಗಪ್ಪ, ನಾಗಪ್ಪ ಮಾಮಿಡಿದೊಡ್ಡಿ, ತಿಮ್ಮಪ್ಪ ಕೋರ್ವಿಹಾಳ, ರಂಗನಗೌಡ ಕೊತ್ತದೊಡ್ಡಿ, ರಮೇಶ ಯಾಪಲದಿನ್ನಿ ಪಾಲ್ಗೊಂಡಿದ್ದರು