ಜಿಲ್ಲೆ

ಸ್ತ್ರೀಯರು ಸ್ವಾಭಿಮಾನದಿಂದ ಬದುಕಬೇಕು

ಬೆಟ್ಟದಪುರ: ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರು ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯದೊಂದಿಗೆ ಬದುಕಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟದಪುರ ಬಿ.ಸಿ. ಟ್ರಸ್ಟ್ ವತಿಯಿಂದ ಚಪ್ಪರದಹಳ್ಳಿಯ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರು 30 ವರ್ಷಗಳ ಪರಿಕಲ್ಪನೆಯಲ್ಲಿ ಮಹಿಳೆಯರ ಸರ್ವತೋಮುಖ ಸುಧಾರಣೆಗೆ ಜ್ಞಾನ ವಿಕಾಸ ಕೇಂದ್ರ ಚಟುವಟಿಕೆ ಆರಂಭಿಸಿದೆ ಎಂದರು.
ಮಹಿಳೆಯರೇ ನಡೆಸಿಕೊಟ್ಟ ಗೀತ ಗಾಯನ ಮತ್ತು ಜಾನಪದ ನೃತ್ಯ ಗಮನ ಸೆಳೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.ಚಪ್ಪರದಹಳ್ಳಿ ಗ್ರಾಪಂ ಅಧ್ಯಕ್ಷ ದೇವೇಗೌಡ, ಉಪಾಧ್ಯಕ್ಷೆ ಪ್ರೇಮಮ್ಮ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬಿ.ಎಸ್ ಜಯಲಕ್ಷ್ಮೀ, ಶಿಕ್ಷಕ ಎಸ್.ಮಹೇಶ್, ಅರ್ಚಕ ಸಿ.ಎನ್ ಬಸವರಾಜು, ಯೋಜನಾಧಿಕಾರಿ ಸಂತೋಷ್, ಮೇಲ್ವಿಚಾರಕ ಜಗನ್ನಾಥ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಮಿತಾ, ಸೇವಾ ಪ್ರತಿನಿಧಿಗಳಾದ ಜ್ಯೋತಿ, ವೀಣಾ ಇದ್ದರು.