ಜಿಲ್ಲೆ

ಸ್ತ್ರೀಕುಲಕ್ಕೆ ಮಾದರಿ ಹೆಮರೆಡ್ಡಿ ಮಲ್ಲಮ್ಮ

ಬಾಗಲಕೋಟೆ:  ಆದರ್ಶ ಗೃಹಿಣಿ, ಶ್ರೇಷ್ಟ ಶಿವಶರಣೆ ಹಾಗೂ ತಾಳ್ಮೆ ಮತ್ತು ತ್ಯಾಗದ ಗುಣಗಳನ್ನು ಹೊಂದಿದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆಂದು ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಹೇಮರೆಡ್ಡಿ ವiಲ್ಲಮ್ಮ ಜಯಂತಿ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಭಾರತೀಯ ಆಜ್ಞಾತ್ಮಿಕವನ್ನು ಶ್ರೀಮಂತಗೊಳಿಸಲು ನಮ್ಮ ಸಮಾಜಕ್ಕೆ ಆದರ್ಶ ಪವಾಡಗಳನ್ನು ಪ್ರಾರಂಭ ಮಾಡಿರುವ ಹಲವು ಶಿವಶರಣೆಯರಲ್ಲಿ ಹೇಮರೆಡ್ಡಿ ಮಲ್ಲಮ್ಮರು ಒಬ್ಬರಾಗಿದ್ದಾರೆ ಎಂದರು.

ವೇಮ ಎಂದರೆ ಬಂಗಾರ, ಜ್ಞಾನ, ರೆಡ್ಡಿ ಎಂದರೆ ಅನ್ನದಾತ ಹಾಗೂ ಮಲ್ಲಮ್ಮ ಎಂದರೆ ಸಂಸ್ಕøತಿಯಾಗಿದೆ. ಮಲ್ಲಮ್ಮನಲ್ಲಿರುವ ಪರೋಪಕಾರ, ತ್ಯಾಗ, ಸಂಸ್ಕಾರ, ಗುರು-ಹಿರಿಯರ ಬಗ್ಗೆ ಅಪಾರವಾದ ಗೌರವ, ಭಕ್ತಿ ಹಾಗೂ ಸಮಾಜ ಸೇವೆಯಂತಹ ಆದರ್ಶ ಮೌಲ್ಯಗಳನ್ನು ಹೊಂದಿದ ದೃವತಾರೆ ಮಲ್ಲಮ್ಮರಾಗಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಅಂದಾಗ ಮಾತ್ರ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಅವರು ಮಹಾಸಾದ್ವಿ ಮಲ್ಲಮ್ಮರ ಆದರ್ಶಗಳನ್ನು ನಾವೇಲ್ಲರೂ ಪಾಲಿಸಬೇಕು. ಸಹಣೆ, ತ್ಯಾಗ, ಅವರ ಕಾರ್ಯಕ್ರಮತೆ ಗುಣಗಳು ಎಲ್ಲ ಕಾಲದಲ್ಲಿ ಪ್ರಚಲಿತದಲ್ಲಿವೆ. ಕೆಟ್ಟವರನ್ನು ಒಳ್ಳೇಯವರನ್ನಾಗಿ ಕಂಡಾಗ ಮಾತ್ರ ಅವರನ್ನು ಸರಿದಾರಿಗೆ ತರಬಹುದಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಾವು ಸಹ ನಡೆಯಬೇಕಿದೆ ಎಂದರು.

ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿ ಆದರ್ಶ ವ್ಯಕ್ತಿಗಳ ಸ್ಥಾನದಲ್ಲಿ ಮಲ್ಲಮ್ಮರು ಒಬ್ಬರಾಗಿದ್ದಾರೆ. ಜೀವನದ ಕಷ್ಟ, ಸುಖಗಳನ್ನು ಅನುಭವಿಸಿ ಈಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ತಾಳ್ಮೆಗೆ ಮತ್ತೊಂದು ಹೆಸರೇ ಮಲ್ಲಮ್ಮ. ಒಬ್ಬ ತಾಯಿ ಅಥವಾ ಮಹಿಳೆ ಮನಸ್ಸು ಮಾಡಿದರೆ ಕೆಟ್ಟ ಕುಟುಂಬವನ್ನು ತಿದ್ದು ಸುಸಂಸ್ಕøತವನ್ನಾಗಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳು ಸ್ತ್ರೀಕುಲಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಮುಧೋಳ ಆರ್.ಎಂ.ಜಿ ಪಿಯು ಕಾಲೇಜಿನ ಶಿಕ್ಷಕಿ ಅನಿತಾ ಪಾಟೀಲ ಮಾತನಾಡಿ ಮಲ್ಲಮ್ಮ ಜೀವನವಿಡಿ ಕಷ್ಟಗಳನ್ನುಂಡರೂ ತನಗೆ ನೋವುಂಟು ಮಾಡಿದವರ ಹಿತವನ್ನು ಬಯಸಿದವರು. ಜೊಳದಾನ ಮಾಡಿ ಮಣ್ಣಿನ ಕಣಗಳಿಂದ ಬೆಳೆ ಬೆಳೆದವರು ಮಲ್ಲಮ್ಮ. ಮನೆಯ ಒಡತಿಯಾಗಿದ್ದರೂ ದಾಸಿಯಂತೆ ಸೇವೆ ಸಲ್ಲಿಸಿ ಎಂತಹ ಕಷ್ಟದಲ್ಲಿಯೂ ಶಿವನನ್ನು ಸ್ಮರಿಸುತ್ತಿದ್ದರು. ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾದ್ಯ ದೈವನಾಗಿ ಆರಾಧಿಸಿ, ಅವರನ್ನು ಸಾಕ್ಷಾತ್ಕರಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದವರು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ಶೋಭಾ ಕಟಗೇರಿ, ಆರ್.ಎಸ್.ಪಾಟೀಲ, ವಿರುಪಾಕ್ಷ ಹಾದಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.