ಜಿಲ್ಲೆ

ಸ್ತ್ರೀ ಸಶಕ್ತೀಕರಣಕ್ಕೆ ಭಾರತವೇ ಸ್ಫೂರ್ತಿ

ಕಲಬುರಗಿ: ಭಾರತದ ಮಹಿಳೆಯರು ಮನೆಗೆ ಸೀಮಿತರಲ್ಲ ಎಂಬ ಸಂದೇಶವನ್ನು ವಿಶ್ವಕ್ಕೆ ತೋರಿಸಿದ್ದು, ಉಲ್ಲಾಳದ ರಾಣಿ ಅಬ್ಬಕ್ಕ, ವೀರಮಾತೆ ಅಹಲ್ಯಾಬಾಯಿ, ರನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚನ್ನಮ್ಮ ಸೇರಿ ಹಲವರು. ಅವರ ಸಾಹಸಗಾಥೆಗಳು ನಮ್ಮ ಹೋರಾಟ, ದೇಶಭಕ್ತಿಗೆ ಸದಾ ಸ್ಫರ‍್ತಿ, ಮಾದರಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂದ ಕೃಷ್ಣಾ ಜೋಶಿ ಹೇಳಿದರು.

ಅಖಿಲ ಭಾರತೀಯ ವಿದ್ಯರ‍್ಥಿ ಪರಿಷತ್​ನಿಂದ ವೀರರಾಣಿ ಅಬ್ಬಕ್ಕ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಹೋರಾಟದ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡ "ವೀರ ಮಹಿಳೆ ರಥಯಾತ್ರೆ'ಗೆ ಸ್ವಾಗತಿಸಿ, ನಗರದ ಎನ್​ವಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ರ‍್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

ಮಹಿಳೆಯರು ಮೀಸಲಾತಿಯಿಂದ ಮೇಲೆ ಬರದೆ ಸಾರ‍್ಥ್ಯದಿಂದ ಸಾಧಕರಾಗಬೇಕು. ಪ್ರಧಾನಿ ನರೇಂದ್ರ ಮೋದಿ ರಾಜಕೀಯದಲ್ಲೂ ಶೇ.೩೩ ಮಹಿಳೆಯರಿಗೆ ಮೀಸಲು ನೀಡುತ್ತಿದ್ದಾರೆ. ಮೀಸಲು ಮೀರಿ ಸಾಧನೆಯತ್ತ ಸಾಗಬೇಕು. ಹೋರಾಟಗಾರರಾದ ರಾಣಿ ಅಬ್ಬಕ್ಕ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಸ್ಫರ‍್ತಿ ಆಗಬೇಕು ಎಂದರು.

ಮುಖ್ಯ ಅತಿಥಿ ಡಾ.ಜ್ಯೋತಿ ತೆಗನೂರು ಮಾತನಾಡಿ, ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಮುಂದಿದ್ದು, ಕಳೆದ ೫೦೦ ರ‍್ಷದ ಹಿಂದೆಯೂ ಪರ‍್ಚುಗಿಸರ ವಿರುದ್ಧ ರಾಣಿ ಅಬ್ಬಕ್ಕ, ಬ್ರೀಟಿಷರ ವಿರುದ್ಧ ರಾಣಿ ಚನ್ನಮ್ಮ ಹೋರಾಡಿದ್ದು, ಇಡೀ ಸ್ತ್ರೀ ಕುಲಕ್ಕೆ ಸ್ಫರ‍್ತಿ ಎಂದರು.

ಪ್ರಮುಖರಾದ ಡಾ.ವಂದನಾ ಕಾಮಶೆಟ್ಟಿ, ದೀಪಕ್​ ಅಣ್ಣಾರಾವ ಪಂಡಿತ್​, ಡಾ.ಗೌತಮ ಜಾಗಿರದಾರ, ಡಾ.ಕವಿರಾಜ ಪಾಟೀಲ್​, ರಾಜ್ಯ ಕರ‍್ಯರ‍್ಶಿ ಸಚಿನ್​ ಕುಳಗೇರಿ, ರಾಜ್ಯ ಸಹಕರ‍್ಯರ‍್ಶಿ ಹಣಮಂತ ಬಗಲಿ, ಪ್ರವಿಣ ನಾಯಕ, ಮನೋಜಕುಮಾರ, ಕೈಲಾಸ ಪಾಟೀಲ್​, ಹೇಮಂತ, ರಕ್ಷಿತಾ ಇತರರಿದ್ದರು. ವಿದ್ಯರ‍್ಥಿನಿ ಸಂಯುಕ್ತಾ ಪ್ರರ‍್ಥಿಸಿದರು. ಭಗವಂತರಾವ ಪಾಟೀಲ್​ ನಿರೂಪಣೆ ಮಾಡಿದರು.