ಆಳಂದ: ಶರಣರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳಾ ಸಮಾನತೆಗಾಗಿ 12ನೇ ಶತಮಾನದಲ್ಲಿಯೇ ಹೋರಾಟ ನಡೆಸಿದ ಅಕ್ಕಮಹಾದೇವಿ ಎಲ್ಲರಿಗೂ ಸ್ಫೂರ್ತಿ ಎಂದು ಶಾಸಕ ಬಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.
ಶರಣ ಏಕಾಂತ ರಾಮಯ್ಯ ಅನುಭವ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ 11ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಕಮಹಾದೇವಿ ಅವರ ವಚನಗಳಲ್ಲಿ ಅದ್ಭುತ ಶಕ್ತಿಯಿದ್ದು, ಸ್ತ್ರೀಯರ ಧ್ವನಿಯಾಗಿದ್ದವು. ಸರಳ ಭಾಷೆ ಮತ್ತು ಶೈಲಿಯಲ್ಲಿ ರಚಿಸಲಾಗಿದೆ. ಸ್ವಯಂ ಸಾಕ್ಷಾತ್ಕಾರದ ಅನ್ವೇಷಣೆ, ಮಾನವ ಬಯಕೆಯ ಸ್ವರೂಪ, ಪ್ರೀತಿಯ ಪ್ರಾಮುಖ್ಯತೆಯನ್ನು ಸಾರುತ್ತವೆ. ಸಾಮಾಜಿಕ ನಿಯಮ ಮತ್ತು ಸಂಪ್ರದಾಯಗಳನ್ನು ಪ್ರಶ್ನಿಸುವ ಅಗತ್ಯತೆಯನ್ನು ತಿಳಿಸುತ್ತವೆ ಎಂದರು.
11 ವರ್ಷ ನಿರಂತರವಾಗಿ ಕಾರ್ಯಕ್ರಮ ಮಾಡುವುದು ಸಣ್ಣ ವಿಷಯವಲ್ಲ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಿರಂತರ ಕಾರ್ಯಕ್ರಮ ಮೂಲಕ ಶರಣರ ವಿಚಾರಧಾರೆಯನ್ನು ಸರ್ವರಿಗೂ ತಲುಪಿಸುವ ಮಹತ್ತರ ಕೆಲಸ ಮಾಡುತ್ತಿರುವ ಶ್ಲಾಘನೀಯ ಎಂದು ತಿಳಿಸಿದರು.
ದೀಪ್ತಿ ಮಡ್ಡೆ ಉಪನ್ಯಾಸ ನೀಡಿದರು. ಪ್ರಮುಖರಾದ ಕೃಷ್ಣಪ್ಪ ಬೆಳವಣಿಕಿ, ಬಸವರಾಜ ಕೋಡ್ಲೆ, ವೈಶಾಲಿ ಪಾಟೀಲ್, ಶೋಭಾ ದೊಡ್ಡಮನಿ, ಮಹಾದೇವ ಹತ್ತಿ, ದತ್ತಾತ್ರೇಯ ಬಿರಾದಾರ, ಸಂಜಯ ಪಾಟೀಲ್, ಬಾಬುರಾವ ಮಡ್ಡೆ, ಪ್ರಭಾಕರ ಸಲಗರೆ, ಅಪ್ಪಸಾಬ ತೀರ್ಥೆ, ಮಲ್ಲಿನಾಥ ವಚ್ಛೆ, ಪ್ರಮೋದ ಪಾಂಚಾಳ, ಲಿಂಗರಾಜ ಪಾಟೀಲ್, ರಾಮಣ್ಣ ಸುತಾರ್, ರಮೇಶ ಮಾಡಿಯಾಳಕರ, ಶ್ರೀಮಂತರಾವ ಪಾಟೀಲ್ ಇತರರಿದ್ದರು.