ಹುಮನಾಬಾದ್: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು 5 ಗ್ಯಾರಂಟಿಗಳು ಜಾರಿಗೆ ತರುವ ಮೂಲಕ ಸಮಗ್ರ ಅಭಿವೃದ್ಧಿ ಜತೆಗೆ ಮಹಿಳೆಯರ ಅಭಿವೃದ್ಧಿಗೂ ಒತ್ತು ನೀಡಿರುವುದನ್ನು ಮಹಿಳೆಯರಿಗೆ ತಿಳಿಸುವುದರ ಮೂಲಕ ಕಾಂಗೇಸ್ ಪಕ್ಷದ ಸಂಘಟನೆಗೆ ಜಿಲ್ಲಾ ಹಾಗೂ ಮಹಿಳಾ ಘಟಕ ಶ್ರಮಿಸಬೇಕೆಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಸಲಹೆ ನೀಡಿದರು.
ಪಟ್ಟಣದ ನಿವಾಸದಲ್ಲಿ ಮಂಗಳವಾರ ತಮಗೂ ಹಾಗೂ ಮಾಜಿ ಶಾಸಕ ಅಶೋಕ ಖೇಣಿ ಅವರಿಗೆ ಕಾಂಗ್ರೇಸ್ ಪಕ್ಷದ ಮಹಿಳಾ ಘಟಕದ ನೂತನ ಜಿಲ್ಲಾ ಅಧ್ಯಕ್ಷೆ ಪೂಜಾ ಜಾರ್ಜ್ ಸಮುವೇಲ್, ವಿವಿಧ ತಾಲೂಕು ಘಟಕದ ಅಧ್ಯಕ್ಷರೊಂದಿಗೆ ಭೇಟಿ ಮಾಡಿ ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು,
ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರದಲ್ಲಿದ್ದು, ಸರಕಾರದ ಯೋಜನೆಗಳ ಬಗ್ಗೆ ಮಹಿಳೆಯರಿಗೆ ತಿಳಿಸಿ ಪ್ರಚಾರ ನಡೆಸಬೇಕು. ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮೂಲಕ ಮಹಿಳಾ ಘಟಕದ ಪದಾಧಿಕಾರಿಗಳು,ಮುಖಂಡರು, ಕಾರ್ಯಕರ್ತೆಯರು ಸೇರಿ ಜಿಲ್ಲೆಯಲ್ಲಿ ಮತ್ತಷ್ಟೂ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಚುರುಕಿನಿಂದ ಕೆಲಸ ನಿರ್ವಹಿಸುವಂತೆ ಹೇಳಿದರು.
ವಿವಿಧ ತಾಲೂಕು ಪಕ್ಷದ ಮಹಿಳಾ ಘಟಕದ ಅಧ್ಯಕ್ಷರಾದ ಸರೇಖಾರಡ್ಡಿ, ಸುಮಿತ್ರಾಬಾಯಿ ಪರೀಟ್, ಕಲಾವತಿ, ಸವಿತಾ, ಅನುಸೂಯಾ, ಅನೀತಾ, ಪ್ರೀಯಾ ಗಂದಗೆ ಇತರರಿದ್ದರು.