ಜಿಲ್ಲೆ

ಸ್ತ್ರೀ ಸಬಲೀಕರಣಕ್ಕೆ ಶಕ್ತಿ ಬರಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ, ತೋರಿಸುತ್ತಿದ್ದು, ಇತಿಹಾಸದ ಪುಟದಲ್ಲಿ ಚಿರಸ್ಥಾಯಿ ಆಗಿ ಉಳಿದಿದ್ದಾರೆ. ಅಂತಹ ಸ್ತಿçÃಯರು ಆತ್ಮಗೌರವ, ಸ್ವಾವಲಂಭಿ ಜೀವನಕ್ಕೆ ಸಿದ್ಧರಾಗಿದ್ದಾಗ ಸಬಲೀಕರಣ ಸಾಧ್ಯ ಎಂದು ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶೈಲಜಾ ಸಿ.ವಿ.ಹೇಳಿದರು.

ನಗರದ ಬಸವರಾಜ ಅಪ್ಪ ಸ್ಮರಣಾರ್ಥ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿ¯್ಲÁ ಘಟಕ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಅಂತಾರಾಷ್ಟಿçÃಯ ಮಹಿಳಾ ದಿನ, ಜಿ¯್ಲÁ ಪದಾಧಿಕಾರಿಗಳ ಪದಗ್ರಹಣ, ಸುಭದ್ರ ರೇಖೆಗಳು ಕವನ ಸಂಕಲನ ಬಿಡುಗಡೆ ಹಾಗೂ ಸಾಧಕರಿಗೆ ರಾಣಿ ಅಬ್ಬಕ್ಕದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಶಿವಾಜಿ ತಾಯಿ ಜೀಜಾಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಕ್ಕ ಮಹಾದೇವಿ ಸೇರಿ ಹಲವು ಮಹಿಳೆಯರು ಇತಿಹಾಸದಲ್ಲಿ ಹೆಸರು ದಾಖಲಿಸಿz್ದÁರೆ ಎಂದು ಹೇಳಿದರು.

ಭಾರತೀಯ ಸ್ತಿçÃಯರಲ್ಲಿ ಹಲವು ವೈರುಧ್ಯಗಳಿದ್ದು, ಮಹಿಳಾ ದಿನ ಪುರುಷ ವಿರೋಧಿ ಆಚರಣೆಯಲ್ಲ. ನಮ್ಮೊಳಗೆ ಮಂಥನ ಮಾಡಿಕೊಳ್ಳಲು ಇರುವ ಅವಕಾಶ. ಹೆಣ್ಣಿಗೆ ತನ್ನದೇ ಕಾರ್ಯಕ್ಷೇತ್ರ, ಕರ್ತವ್ಯಗಳಿವೆ. ಇಲ್ಲಿ ಅಸಮಾನತೆಯ ಪ್ರಶ್ನೆಯೇ ಬರಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟನೆ ಮುಖ್ಯ. ಎಲ್ಲರೂ ಒಂದಾಗಿ ದೌರ್ಜನ್ಯ ವಿರೋಧಿಸಬೇಕು. ಭಾರತದಲ್ಲಿ ಮಹಿಳೆಯನ್ನು ಪೂಜ್ಯನೀಯ ಸ್ಥಾನದಲ್ಲಿ ಇಡಲಾಗಿದೆ. ಶಾಸನಸಭೆಗಳಲ್ಲಿ ಶೇ.೩೩ ಮೀಸಲು ನೀಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಿz್ದÁರೆ ಎಂದು ಹೇಳಿದರು.

ಕೃತಿ ಬಿಡುಗಡೆ: ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸುಭದ್ರಮ್ಮ ರಾಜೋಳಿ ರಚಿಸಿದ `ಸುಭದ್ರೆ ರೇಖೆಗಳು' ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಜಿ¯್ಲÁ ಪದಾಧಿಕಾರಿಗಳ ಪದಗ್ರಹಣ, ವಿವಿಧ ಸಾಧಕರಿಗೆ ರಾಣಿ ಅಬ್ಬಕ್ಕದೇವಿ ಪ್ರಶಸ್ತಿ ಪ್ರದಾನ ನಡೆಯಿತು.

ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಸಾನ್ನಿಧ್ಯ ವಹಿಸಿದ್ದರು. ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರಮಾ, ಜಿ¯್ಲÁಧ್ಯಕ್ಷೆ ನಂದಿನಿ ಸನಬಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿ¯್ಲÁ ತರಬೇತಿ ಕೇಂದ್ರದ ಪ್ರಾಂಶುಪಾಲೆ ರವಿಕಾಂತಿ ಕ್ಯಾತನಾಳ, ಪ್ರಮುಖರಾದ ಶರಣಮ್ಮ ಪಾಟೀಲ್, ಸುರೇಶ ಶರ್ಮಾ, ಸುಭಾಶ್ಚಂದ್ರ ಬರ್ಮಾ, ಸದಾನಂದ ಪೆರ್ಲಾ, ವಿಜಯಕುಮಾರ ತೇಗಲತಿಪ್ಪಿ, ಜ್ಯೋತಿ ಪಾಟೀಲ್, ವೈ.ಬಿ.ಕಡಕೋಳ, ಮಾಲಾ ಕಣ್ಣಿ ಇತರರಿದ್ದರು. ಬಸಯ್ಯಸ್ವಾಮಿ ಹಿರೇಮಠ ಪದಾಧಿಕಾರಿಗಳ ಪದಗ್ರಹಣ ನಡೆಸಿಕೊಟ್ಟರು. ಚಂದ್ರಕಲಾ ನಂದರಗಿ ಪ್ರಾರ್ಥಿಸಿದರು. ಶಿವಕಾಂತಮ್ಮ ಕಲ್ಲೂರು ಸ್ವಾಗತಿಸಿದರು. ಪೂರ್ವಿ ಪವಾರ ಭರತನಾಟ್ಯ ಗಮನಸೆಳೆಯಿತು.