ಔರಾದ್: ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಉಚಿತ ಪ್ರಯಾಣಕ್ಕೆ ಶಕ್ತಿ, ಆರ್ಥಿಕ ಸಹಕಾರಕ್ಕಾಗಿ ಗೃಹಲಕ್ಷಿ ಯೋಜನೆ ಜಾರಿಗೆ ತರಲಾಗಿದೆ ಎಂದು ಪಿಡಿಒ ದತ್ತಾತ್ರೇಯ ಪಾಟೀಲ್ ಹೇಳಿದರು.
ತಾಲೂಕಿನ ಬಾದಲಗಾಂವ ಗ್ರಾಪಂನಲ್ಲಿ ಗೃಹಲಕ್ಷಿ ಯೋಜನೆ ಚಾಲನೆ ಹಾಗೂ ನೇರ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಯೋಜನೆ ಇದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಆನಂದ ಗಲಗಲೆ ಮಾತನಾಡಿ, ಈ ಯೋಜನೆಯಿಂದ ಎಲ್ಲ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಗೃಹಲಕ್ಷಿ ಯೋಜನೆ ಲಾಭ ಎಲ್ಲ ಮಹಿಳೆಯರು ಪಡೆಯಬೇಕು ಎಂದು ಹೇಳಿದರು.
ಸೋಪಾನರಾವ ಶೇರಿಕಾರ, ಭಾಗ್ಯಶ್ರೀ, ಶೀಲಾ, ಅನುರಾಧಾ, ರೇಷ್ಮಾ, ಪ್ರಕಾಶ, ಖಲೀಲ್, ಸುಭಾಷ, ಗೌತಂ, ದೇವಿದಾಸ ಕಾಂಬಳೆ, ಆತ್ಮರಾಮ್ ಪಾಟೀಲ್, ಸಂದೀಪ ಇತರರಿದ್ದರು.