ಸರಗೂರು: ಸ್ತ್ರೀ ಶಕ್ತಿ ಗುಂಪುಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಹಾಗೂ ಸ್ನೇಹ ಸ್ತ್ರೀ ಸಮಾಜ ಸಂಘದ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಅಭಿಪ್ರಾಯಪಟ್ಟರು.
ಮೈಸೂರಿನ ಜೆಎಸ್‌ಎಸ್ ರೇಡಿಯೋ 91.2 ಎಫ್‌ಎಂ ಸಮುದಾಯ ಬಾನುಲಿ ಕೇಂದ್ರದಿಂದ ಇವರು ನಮ್ಮವರು ವಿಶೇಷ ಸರಣಿ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಶಿವಕುಮಾರ್ ಜತೆ ಮಾತನಾಡಿಸಿದರು.
ಸ್ತ್ರೀ ಶಕ್ತಿ ಸಂಘಗಳು ಸ್ಥಾಪನೆಯಾದ ನಂತರ ಮಹಿಳೆ ಸಮಾಜ ಮುಖ್ಯ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಗೋಡೆಗಳಲ್ಲಿರುತ್ತಿದ್ದ ಮಹಿಳೆ ತನ್ನ ಕಾಲ ಮೇಲೆ ನಿಂತು ಕುಟುಂಬವನ್ನೆಲ್ಲ ನಿಭಾಯಿಸುವ ಕಾರ್ಯವನ್ನು ಮಾಡುತ್ತಿದ್ದಾಳೆ. ಸಂಘ ಮಹಿಳೆಯರಲ್ಲಿ ಶಿಸ್ತು ಹಾಗೂ ಸಮಯಪಾಲನೆಯನ್ನು ತಿಳಿಸುವುದರ ಜತೆ ಸಮಾಜದಲ್ಲಿ ಮಹಿಳೆಯರು ಮುಖ್ಯವಾಹಿನಿಯಲ್ಲಿ ಜೀವನ ನಡೆಸುವುದನ್ನು ತಿಳಿಸಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮ ಮಟ್ಟದ ಹಲವು ಸಂಘಗಳಿಗೆ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಪ್ರತಿ ಮಹಿಳೆಯರು ವಿವಿಧ ಇಲಾಖೆಗಳು ನೀಡುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ರೇಡಿಯೋವನ್ನು ಜೆಎಸ್‌ಎಸ್ ರೇಡಿಯೋ ಆ್ಯಪ್ ಮೂಲಕವೂ ವಿಶ್ವದ ಯಾವುದೇ ಮೂಲೆಯಲ್ಲಾದರೂ ಆಲಿಸಬಹುದು ಎಂದರು.