ಜಿಲ್ಲೆ

ಸ್ತ್ರೀ ಯರಿಗೆ ವಿಶೇಷ ಸ್ಥಾನ ಅಗತ್ಯ

ಕಲಬುರಗಿ: ಹೆಣ್ಣು ಮಗುವಿನ ಜನನದಿಂದ ಮನೆ ಬೆಳಗುತ್ತದೆ. ಹೆಣ್ಣು ಮಗುವೆಂದು ಅಲ್ಲಗಳೆಯದೇ ಸಮಾಜದಲ್ಲಿ ವಿಶೇಷ ಸ್ಥಾನ, ಗೌರವ ನೀಡಬೇಕು ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಆರ್.ಹೇಳಿದರು.

ಕೇಂದ್ರ ಕಾರಾಗೃಹದಲ್ಲಿ ರಾಷ್ಟೀçಯ ಹೆಣ್ಣು ಮಗು ದಿನದ ನಿಮಿತ್ತ ಮಹಿಳಾ ಶಿಕ್ಷಾ ಮತ್ತು ವಿಚಾರಣಾ ಬಂಧಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಹೆಣ್ಣು ಮಗುವಿನ ಶ್ರೇಷ್ಠತೆ, ವಿವಿಧ ಮನೋರಂಜನಾ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಭ್ರೂಣಹತ್ಯೆ ಕಾನೂನಿನ ನೆರವಿನಿಂದ ಹತ್ತಿಕ್ಕಬೇಕು. ಸರ್ಕಾರದ ಹಲವು ಯೋಜನೆ ಹಾಗೂ ಮೀಸಲಾತಿಗಳಿಂದ ಪ್ರಸ್ತುತ ಮಹಿಳೆ ವಿವಿಧ ಕ್ಷೇತ್ರಗಳಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.

ಕಾರಾಗೃಹದಿAದ ಬಿಡುಗಡೆಯಾದ ನಂತರ ಇತರರಲ್ಲಿ ಜಾಗೃತಿ ಮೂಡಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೇ ಸ್ವಾವಲಂಬಿ ಮಹಿಳೆಯರಾಗಿ ಸಮಾಜದಲ್ಲಿ ಬದುಕಬೇಕು ಎಂದು ಸಲಹೆ ನೀಡಿದರು.

ಮಹಿಳಾ ಬಂದಿಗಳಿಗೆ ರಂಗೋಲಿ, ಒಂದು ನಿಮಿಷದಲ್ಲಿ ಹಣೆ ಬೊಟ್ಟು ಇಡುವ ಸ್ಪರ್ಧೆ, ಚಿತ್ರ ಬರೆಯುವ ಸ್ಪರ್ಧೆ, ಮ್ಯೂಸಿಕಲ್ ಚೇರ್, ಕೆರೆ-ದಡ ಸೇರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಭಾರಿ ಅಧೀಕ್ಷಕ ಬಿ.ಸುರೇಶ, ಆಡಳಿತಾಧಿಕಾರಿ ಭೀಮಾಶಂಕರ ಢಾಂಗೆ ನಿರ್ಣಾಯಕರಾಗಿದ್ದರು.

ಸಹಾಯಕ ಅಧೀಕ್ಷಕ ಚನ್ನಪ್ಪ, ಜೈಲರ್‌ಗಳಾದ ಸುನಂದಾ ವಿ.ಆರ್., ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಶಿಕ್ಷಕರಾದ ನಾಗರಾಜ ಮೂಲಗೆ ಇತರರಿದ್ದರು. ಅಶ್ವಿನಿ ಎಂ.ಎಚ್. ನಿರೂಪಣೆ ಮಾಡಿದರು.