ಜಿಲ್ಲೆ

ಸ್ತನ್ಯಪಾನದ ಅರಿವು ಮೂಡಿಸಲು ವಾಕಥಾನ್

ಮೈಸೂರು: ಮದರ್‌ಹುಡ್ ಆಸ್ಪತ್ರೆ ವತಿಯಿಂದ ಸ್ತನ್ಯಪಾನದ ಅರಿವು ಮೂಡಿಸಲು ಆ.20ರಂದು ಬೆಳಗ್ಗೆ 7ಕ್ಕೆ ವಾಕಥಾನ್ ಆಯೋಜಿಸಲಾಗಿದೆ.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ವಾಕಥಾನ್‌ಗೆ ಚಾಲನೆ ದೊರೆಯಲಿದೆ. ಬಳಿಕ ಚಾಮರಾಜೇಂದ್ರ ಒಡೆಯರ್ ವೃತ್ತದ ಮೂಲಕ ವಿವಿಧ ರಸ್ತೆಗಳಲ್ಲಿ ಸಾಗುವ ಮೂಲಕ ಸ್ತನ್ಯಪಾನದ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.