ಜಿಲ್ಲೆ

ಸ್ಟೀಲ್ ಬ್ರಿಜ್ ಪೂರ್ಣಕ್ಕೆ 4 ತಿಂಗಳ ಗಡುವು : ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ

ಬೆಂಗಳೂರು : ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಬರುವ ೆಬ್ರವರಿಯೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಬಿಬಿಎಂಪಿ ಗಡುವು ನೀಡಿದೆ.

ನಗರದಲ್ಲಿ ವಾಹನದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ 2015ರಲ್ಲಿ ಶಿವಾನಂದ ವೃತದಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಪಾಲಿಕೆ ಯೋಜನೆ ರೂಪಿಸಿತ್ತು. 2017ರಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಜನರ ಪ್ರತಿಭಟನೆ, ಅನಗತ್ಯ ಒತ್ತುವರಿ ಹಾಗೂ ನ್ಯಾಯಾಲಯ ತೀರ್ಪು ಒಳಗೊಂಡು ವಿಳಂಬವಾಯಿತು. ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ, ಮೂರುವರೆ ವರ್ಷ ಕಳೆದರೂ ಪೂರ್ಣಗೊಳ್ಳದೆ ಸ್ಥಳೀಯರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾಮಗಾರಿಗೆ ಬಿಬಿಎಂಪಿ ಚುರುಕು ನೀಡಿದೆ.

ಹಣ ನಿಡಿದ ನಂತರ ಗಡುವು: ಮೇಲ್ಸೇತುವೆ ಕಾಮಗಾರಿ ಮೂಲ ಯೋಜನೆಯಲ್ಲಿ ಸ್ವಲ್ಪ ಬದಲಾಗಿದ್ದು, ಸೇತುವೆಯ ಉದ್ದ ಸ್ವಲ್ಪ ಹೆಚ್ಚಿಸಲಾಗಿದೆ. ಈ ಬಗ್ಗೆ ಸರ್ಕಾರದ ಅನುಮೋದನೆ, ಪಾಲಿಕೆಯಿಂದ ಕಾಮಗಾರಿ ಕೈಗೊಳ್ಳಲು ಹಣ ಬಿಡುಗಡೆ ಮಾಡುವಲ್ಲಿ ಪಾಲಿಕೆ ವಿಲವಾಗಿತ್ತು. ಕಳೆದ ತಿಂಗಳು ಪಾಲಿಕೆ ಆಡಳಿತಾಧಿಕಾರಿ ಮತ್ತು ಆಯುಕ್ತರು ಕಾಮಗಾರಿ ಪರಿಶೀಲಿಸಿ ತೊಂದರೆ ಬಗ್ಗೆ ಮಾಹಿತಿ ಪಡೆದಿದ್ದರು. ಕಾಮಗಾರಿ ಕುರಿತು ಹಣ ಬಿಡುಗಡೆ ಮಾಡಿದ ಪಾಲಿಕೆ, ಕಾಮಗಾರಿ ಮುಸಿಲು 4 ತಿಂಗಳ ಅವಧಿ ಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.25 ಕಾಮಗಾರಿ ಬಾಕಿ: ಮೇಲ್ಸೇತುವೆ ಕಾಮಗಾರಿಯಲ್ಲಿ ಬುನಾದಿಗೆಂದು 64 ಕಂಬಗಳು, 16 ದೊಡ್ಡ ಪಿಲ್ಲರ್‌ಗಳು ಹಾಗೂ 12 ಸ್ಲ್ಯಾಬ್‌ಗಳಿರಲಿವೆ. ಈಗಾಗಲೇ ಕಂಬಗಳ ಅಳವಡಿಕೆ ಪೂರ್ಣಗೊಂಡಿದ್ದು, ಕೆಲವು ಸ್ಲ್ಯಾಬ್‌ಗಳಿಗೆ ಕಾಂಕ್ರೀಟ್ ಹಾಕುವುದು ಸೇರಿ ಇನ್ನಷ್ಟು ಕೆಲಸಗಳು ಬಾಕಿಯಿವೆ. ಸೇತುವೆ ಶೇ.75ಕ್ಕೂ ಅಧಿಕ ಕಾಮಗಾರಿ ಪೂರ್ಣಗೊಂಡಿದೆ.

ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ವರ್ಷದಿಂದ ಪಾಲಿಕೆಯಿಂದ ಹಣ ಬಿಡುಗಡೆ ಆಗಿರಲಿಲ್ಲ. ಈಚೆಗೆ ಹಣ ಬಿಡುಗಡೆ ಮಾಡಲಾಗಿದ್ದು, ಉಳಿದ ಬಾಕಿ ಕಾಮಗಾರಿಯನ್ನು 4 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗಡುವು ನಿಡಲಾಗಿದೆ.

ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ