ಕಲಬುರಗಿ: ನಾವು ವಿಶ್ವಮಾನವತೆಯನ್ನು ಹೇಳುತ್ತೇನೆ. ಸ್ಟಾಲಿನ್ ಹೇಳಿಕೆಯಲ್ಲಿ ತಪ್ಪೇನು ಇಲ್ಲ. ಅದನ್ನು ಪೂರ್ಣವಾಗಿ ಕೇಳದೆ ಅವರ ಆಪಾದನೆಯನ್ನು ಏಕೆ ವಿರೋಧಿಸುತ್ತೀರಿ, ಅವರು ಹೇಳಿದ ಧರ್ಮದಲ್ಲಿನ ದೋಷವನ್ನು ಬದಲಾಯಿಸಿಕೊಳ್ಳಿ ಎಂದು ನಟ ಪ್ರಕಾಶ ರೈ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹೆಂಡತಿಯ ನಂಬಿಕೆ ಆಕೆಗೆ. ಆಕೆ ದೇವರನ್ನು ಆರಾಧಿಸಲಿ, ಪೂಜಿಸಲಿ ಆದರೆ ನನ್ನ ಮೇಲೆ ಹೇರಬಾರದು. ಅದು ನಿಮ್ಮ ರೂಮಿನಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ್ದೇನೆ. ಹಲವು ಪರಿಚಿತರು ತಿರುಪತಿಗೆ ಹೋಗುವಾದ ದರ್ಶನಕ್ಕೆ ರೆಕ್ಮೆಂಡ್ ಮಾಡಿ, ಅವರ ನಂಬಿಕೆಯನ್ನು ಗೌರವಿಸುತ್ತೇನೆ. ಆದರೆ ನನ್ನ ಮೇಲೆ ಹೇರಲು ಬಂದರೆ ವಿರೋಧಿಸುತ್ತೇನೆ ಎಂದರು.
ಪ್ರಪAಚದ ಎಲ್ಲ ಧರ್ಮಗಳು ಹೇಳುವುದು ಮಾನವೀಯತೆ. ಅದನ್ನು ಮೀರಿ ಧರ್ಮ ಮುನ್ನಡೆದಾಗ ಅಂಬೇಡ್ಕರ್, ಬಸವಣ್ಣನವರಂಥವರು ಹುಟ್ಟಿ ಬದಲಾವಣೆಗೆ ಮುನ್ನುಡಿ ಬರೆಯುತ್ತಾರೆ. ನಾವು ಮನುಷ್ಯತ್ವದ ಧರ್ಮದ ಪರ ಮಾತನಾಡುತ್ತಿದ್ದೇವೆ. ಬಸವಣ್ಣ, ಅಂಬೇಡ್ಕರ್ ಇಲ್ಲದಿದ್ದರೆ ನಾನು ಇಲ್ಲಿ ಕುಳಿತು ಮಾತನಾಡುತ್ತಿರಲಿಲ್ಲ, ನಮ್ಮನ್ನು ಹತ್ತಿರವೂ ಸೇರಿಸಿಕೊಳ್ಳುತ್ತಿರಲಿಲ್ಲ ಎಂದರು.
ಭಾರತ ಎಲ್ಲ ಧರ್ಮದ ವೈಶಿಷ್ಟತೆಯನ್ನು ಹೊಂದಿದೆ. ಯಾವುದೇ ವ್ಯಕ್ತಿ, ರಾಜಕೀಯ ನಾಯಕ ಧರ್ಮವನ್ನು ಗುತ್ತಿಗೆ ಪಡೆದಿಲ್ಲ. ಅವರ ಭಾವಕ್ಕೆ ಬಿಡಲಾಗಿದೆ. ದೀಪಾವಳಿಯಂದು ಜನರು ಹಬ್ಬ ಆಚರಿಸುತ್ತಾರೆ ಎಂದು ಆ ರಸ್ತೆಯಲ್ಲಿ ಹೆಣವನ್ನು ತರಲಿಲ್ಲ. ಇದು ಭಾರತ. ಕ್ರಿಕೆಟ್‌ನಲ್ಲಿ ಯಾರೇ ಸಿಕ್ಸ್ ಹೊಡೆದಾಗ ಹಿಂದೂ ಮುಸ್ಲಿಂ ಅಂತಾ ನೋಡಲ್ಲ ಎಂದರು.
ಒAದು ರಾಷ್ಟç ಒಂದು ಚುನಾವಣೆ ಎನ್ನುತ್ತಾರೆ. ದೇಶದಲ್ಲಿ ಒಂದು ಶಿಕ್ಷಣದ ಅವಶ್ಯಕತೆ ಇದೆ. ಸಮಾನತೆಯ ಸವಾಲು ಇದೆ. ಧರ್ಮಸ್ಥಳ ಪವಿತ್ರ ಕ್ಷೇತ್ರ, ಅದನ್ನು ಗೌರವಿಸೋಣ, ಆದರೆ ಅಲ್ಲಿ ಸೌಜನ್ಯ ಕೊಲೆ ಮಾಡಿದವರನ್ನು ವಿರೋಧಿಸಲೇಬೇಕು. ಖಂಡಿಸಲೇಬೇಕು ಎಂದರು.
ಕಲಾವಿದ ಏಕೆ ಮಾತನಾಡಬೇಕು ಎನ್ನುತ್ತಾರೆ. ಸಮಾಜದ ಮುಖವಾಣಿಯಾಗಿ ಕಲಾವಿದನೇ ಮಾತನಾಡಬೇಕು. ಇಂದು ನಾನು ಏನೇ ಆಗಿದ್ದರೂ ನನ್ನ ನಟನೆಯಿಂದಲ್ಲ, ಸಮಾಜದ ಜನರ ಪ್ರೀತಿ, ಪ್ರೋತ್ಸಾಹದಿಂದ ಆಗಿದ್ದೇನೆ. ಅವರ ಪರ ಮಾತನಾಡುತ್ತೇನೆ. ಪಾಂಡವರು, ಕೌರವರು ಹೆಣ್ಣು, ಹೊನ್ನಿಗಾಗಿ ಜಗಳ ಆಡುತ್ತಾರೆ. ಆದರೆ ಅದರ ಪರಿಣಾಮ ಎದುರಿಸುತ್ತಿರುವವರು ಬಡವರು, ಮಹಿಳೆಯರು ಎಂದರು.
ದೇಶದಲ್ಲಿ ೧೭, ೧೮ ವರ್ಷದ ಮಕ್ಕಳು ಕತ್ತಿ ಹಿಡಿದು ಜೈಶ್ರೀರಾಮ ಎನ್ನುತ್ತ ಬೀದಿಗಿಳಿಯುತ್ತಿದ್ದಾರೆ. ಅವರ ಉದ್ಯೋಗದ ಬಗ್ಗೆ ನಾವೆಲ್ಲರೂ ಯೋಚಿಸಬೇಕು. ಅಂಬೇಡ್ಕರ್ ಅಸ್ಪಶ್ಯತೆ ಕಾನೂನು ಜಾರಿಗೆ ತಂದರು. ಆದರೆ ಜನರ ಮನಸ್ಸಿನಲ್ಲಿ ಇನ್ನು ಅಸ್ಪÊಶ್ಯತೆ ದೂರಾಗಿಲ್ಲ. ರಾಜಕೀಯ ದುರುದ್ದೇಶದಿಂದ ಧರ್ಮದ ಬಗ್ಗೆ ಮಾತನಾಡಬಾರದು ಎಂದರು.