ಚನ್ನಪಟ್ಟಣ ಕುಮಾರಸ್ವಾಮಿಯ ಅವರದು ಬೂಟಾಟಿಕೆ ವಾತು, ಕೆಲಸ ಶೂನ್ಯ. ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ರಾಸಲೀಲೆ ಆಡಿಕೊಂಡು ಇದ್ದರು. ಜನಾಭಿಪ್ರಾಯ ಬಿಟ್ಟು ಹೋಟೆಲ್‌ನಲ್ಲಿ ವೈಯಕ್ತಿಕ ಜೀವನ ಮಾಡುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಎಚ್‌ಡಿಕೆ ವಿರುದ್ಧ ಹೊಸ ಬಾಂಬ್ ಸಿಡಿಸಿದರು.
ನಗರದಲ್ಲಿ ಸೋಮವಾರ ನಡೆದ ಡಾ.ಗುರುವಪ್ಪ ಅವರ 87ನೇ ಜನ್ಮದಿನೋತ್ಸವದ ನಂತರ ಸುದ್ದಿಗಾರರ ಜತೆ ಮಾತನಾಡಿ, ಎಚ್‌ಡಿಕೆ ಅಧಿಕಾರದಲ್ಲಿದ್ದಾಗ ಕೇವಲ ಒಂದು ಗಂಟೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಿದ್ದರೆ ಸಾಕಷ್ಟು ಕೆಲಸಗಳು ಆಗುತ್ತಿದ್ದವು. ಆದರೆ, ಆಗ ತಾಲೂಕಿನ ಕಡೆ ತಿರುಗಿಯೂ ನೋಡಲಿಲ್ಲ. ಆಗ ಏನೂ ಮಾಡದೆ ಈಗ ಜನರ ಮುಂದೆ ಕಣ್ಣೀರಿಡುತ್ತಾ ನಾಟಕ ಆಡುತ್ತಿರುವುದು ಅವರಿಗೆ ಶೋಭೆ ತರಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ಮಾಡಿದರು.
ಚರ್ಚೆಗೆ ಸವಾಲ್: ಕುಮಾರಸ್ವಾಮಿ ಹೋಟೆಲ್‌ನಲ್ಲಿ ಏನು ಮಾಡುತ್ತಿದ್ದರು ಎಂಬುದು ಜನತೆಗೆ ಗೊತ್ತಿದೆ. ನನ್ನಿಂದ ಯಾಕಪ್ಪ ಆ ಆಣಿಮುತ್ತುಗಳನ್ನು ಕೇಳ್ತೀರಾ...? ಅವರನ್ನೇ ಕೇಳಿ... ಅವರು ಹೇಳಲಿಲ್ಲ ಎಂದರೆ ನಾನೇ ಹೇಳುತ್ತೇನೆ. ನೇರಾನೇರ ವೈಯಕ್ತಿಕ ಹಾಗೂ ಸಾರ್ವಜನಿಕ ವಿಚಾರಗಳನ್ನು ಚರ್ಚೆ ಮಾಡಲು ಸಿದ್ಧನಿದ್ದೇನೆ. ಅವರಂತೆ ಹಿಟ್ ಆ್ಯಂಡ್ ರನ್ ಮಾಡುವುದಿಲ್ಲ. ದಾಖಲೆ ಸಮೇತ ವಾತನಾಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದರೆ ನಾನೂ ಏಕವಚನದಲ್ಲೇ ಮಾತನಾಡುತ್ತೇನೆ ಎಂದು ಟಾಂಗ್ ನೀಡಿದರು.
ಎದುರಿಸಲು ಸಿದ್ಧ: 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಮಾರಸ್ವಾಮಿಯನ್ನು ಎದುರಿಸುತ್ತೇನೆ. ಕಳೆದ ಚುನಾವಣೆಯಲ್ಲಿ ತಾಲೂಕಿಗೆ ಅನಿರೀಕ್ಷಿತ ಅತಿಥಿಯಾಗಿ ಬಂದು ಗೆದ್ದು ಹೋದರು. ಗೆದ್ದ ಮೇಲೆ ಕ್ಷೇತ್ರಕ್ಕೆ ಏನೂ ವಾಡಿಲ್ಲ. ಈಗಾಗಲೇ ಕುಮಾರಸ್ವಾಮಿ ಪತ್ನಿ ವಿರುದ್ಧ ಒಮ್ಮೆ ಗೆದ್ದಿದ್ದೇನೆ. ತಾಲೂಕಿನ ಅಭಿವೃದ್ಧಿಗೆ ಪ್ರಾವಾಣಿಕವಾಗಿ ಶ್ರಮಿಸಿದ್ದೇನೆ. ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸುತ್ತಾರೆ ಎಂದು ಸಿಪಿವೈ ಹೇಳಿದರು.
ಬಿಜೆಪಿ ಮುಖಂಡರಿಗೆ ಸಿಪಿವೈ ಮನವಿ: ನಮ್ಮ ಪಕ್ಷದ ಕೆಲ ನಾಯಕರಿಗೆ ಬುದ್ಧಿಯಿಲ್ಲ. ಸುಮ್ಮನೆ ಕುಮಾರಸ್ವಾಮಿಯನ್ನು ಅಲ್ಲಲ್ಲಿ ಹೊಗಳುತ್ತಾರೆ. ಅವರನ್ನು ವೈಭವೀಕರಿಸುವ ಅವಶ್ಯಕತೆ ಇಲ್ಲ. ರಾಜಕೀಯವಾಗಿ ವೀಕ್ ಆಗಿರುವ ಅವರಿಗೆ ಬೆಂಬಲ ನೀಡಿದರೆ ಹಿಂದೆ ವಿಧಾನಸೌಧದ ಮುಂದೆ ಕಮ್ಯುನಿಸ್ಟ್ ನಾಯಕರನ್ನು ಕರೆಸಿ ಮಾಡಿದಂತಹ ಟಬಂಧನ್ ಮಾಡಲು ಹೊರಡುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಪಕ್ಷದ ವರಿಷ್ಠರಿಗೆ ಸಿಪಿವೈ ಮನವಿ ಮಾಡಿದರು. ಮಂಡ್ಯ ಮತ್ತು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಹಾಗೂ ಜಿಲ್ಲೆಯಲ್ಲಿ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಜನ ತಿರಸ್ಕರಿಸಿದ್ದಾರೆ. ಅಂಥವರಿಗೆ ನಮ್ಮ ಪಕ್ಷ ಮತ್ತು ಸರ್ಕಾರ ಪ್ರೋತ್ಸಾಹ ಮಾಡುವುದು ಸರಿಯಲ್ಲ. ಈ ಭಾಗದಲ್ಲಿ ಬಿಜೆಪಿ ಬೆಳೆಯಬೇಕು ಎಂದರೆ ನಾವು ಸ್ವತಂತ್ರವಾಗಿರಬೇಕು. ಹೀಗಾಗಿ ಪಕ್ಷದ ವರಿಷ್ಠರು ಗಂಭೀರವಾಗಿ ಚಿಂತಿಸಬೇಕೆಂದು ಸಲಹೆ ನೀಡಿದರು.
ಕೊನೆ ಎಚ್ಚೆರಿಕೆ: ಕುಮಾರಸ್ವಾಮಿ ಒಬ್ಬ ನಯವಂಚಕ. ದಿನೇದಿನೆ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ, ರಾಜಕೀಯ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ. ನನ್ನ ಜನ್ಮಭೂಮಿಯಲ್ಲಿ ಬಂದು ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದರೆ ಅದು ಕುಮಾರಸ್ವಾಮಿಯನ್ನು ಕಾಡುತ್ತಿರುವ ಹತಾಶ ಮನೋಭಾವವಾಗಿದೆ. ನನ್ನ ಬಗ್ಗೆ ಪದೇಪದೆ ಕೆಟ್ಟದಾಗಿ ಮಾತನಾಡುತ್ತಿದ್ದರೆ ಅಡ್ಡಹಾಕಿ ಕೇಳಬೇಕಾಗುತ್ತದೆ. ಅಭಿವೃದ್ಧಿ ಹಾಗೂ ಸಾರ್ವಜನಿಕವಾಗಿ ಚರ್ಚೆ ಮಾಡಲಿ. ಕುಮಾರಸ್ವಾಮಿಗೆ ಕೊನೆಯ ಎಚ್ಚರಿಕೆ ನೀಡುತ್ತೇನೆ. ನನ್ನ ವಿರುದ್ಧ ಉಡಾಫೆ ಮಾತುಗಳನ್ನು ಬಿಡಬೇಕು ಎಂದು ಸಿಪಿವೈ ಎಚ್ಚರಿಸಿದರು.
ದಲಿತರ ಜಮೀನು: ಸಿ.ಪಿ.ಯೋಗೇಶ್ವರ್ ಜನಸಾವಾನ್ಯರ ಆಸ್ತಿ ಕಬಳಿಸಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಯೋಗೇಶ್ವರ್, ನಮ್ಮ ತಾಲೂಕಿಗೆ ಆಕಸ್ಮಿಕ ಅತಿಥಿ. ತಾಲೂಕಿನಲ್ಲಿ 25 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಜನಸಾವಾನ್ಯರ ಆಸ್ತಿ ಹೊಡೆಯುವ ಕೆಲಸ ಮಾಡಿಲ್ಲ. ಯಾರಿಂದಲೂ ಜಮೀನು ಕಸಿದುಕೊಂಡಿಲ್ಲ. ಕುಮಾರಸ್ವಾಮಿ ಮೇಲೆ ದಲಿತರ ಜಮೀನು ಕಿತ್ತುಕೊಂಡಿರುವ ಆರೋಪ ಇದೆ. ಬಿಡದಿ ಬಳಿ ಕಟ್ಟಿಕೊಂಡಿರುವ ಬಂಗಲೆ ದಲಿತರಿಂದ ಕಿತ್ತುಕೊಂಡಿರುವ ಜಮೀನಿನಲ್ಲಿದೆ ಎಂಬ ಆಪಾದನೆ ಇದೆ ಎಂದು ಏಕವಚನದಲ್ಲಿ ತಿರುಗೇಟು ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಲವೇಗೌಡ, ಬಿಜೆಪಿ ಮುಖಂಡರಾದ ಎಸ್. ಲಿಂಗೇಶ್‌ಕುವಾರ್, ವಿ.ಬಿ. ಚಂದ್ರು, ಎಂ.ಎನ್. ಆನಂದಸ್ವಾಮಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.