ಜಿಲ್ಲೆ

ಸ್ಕೌಟ್ಸ್, ಗೈಡ್ಸ್ ನಿಂದ ನಾಯಕತ್ವ ಗುಣ ವೃದ್ಧಿ

ಕಬ್ಬೂರ: ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಬೆಳೆಸುವುದರ ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದು ಶಾಲಾ ಮುಖ್ಯಶಿಕ್ಷಕ ಡಾ.ಮಹೇಂದ್ರ ಕೆ.ಆರ್. ತಿಳಿಸಿದರು.

ಪಟ್ಟಣದ ಶ್ರೀ.ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಓಂ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಽಕಾರಿಗಳ ಕಾರ್ಯಾಲಯ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನ, ಚಿಂತನಾ ದಿನ ಹಾಗೂ ಸರ್ವಧರ್ಮ ಪ್ರಾರ್ಥನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನಾ ಶಿಕ್ಷಕ ಎನ್.ಜಿ.ಪಾಟೀಲ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ಉದ್ಯೋಗ ಹಾಗೂ ಶಿಕ್ಷಣದಲ್ಲೂ ಮೀಸಲಾತಿ ಪಡೆದುಕೊಳ್ಳಬಹುದು ಎಂದರು. ಧ್ವಜಾರೋಹಣ ಹಾಗೂ ವಿವಿಧ ಕಾರ್ಯಕ್ರಮ ನೆರವೇರಿಸಲಾಯಿತು.

ಶಾಲಾ ಕಾರ್ಯದರ್ಶಿ ಡಾ.ಪ್ರಕಾಶ ಬೆಲ್ಲದ, ಡಿ.ಬಿ.ಅತ್ತಾರ, ರಾಜು ಮಹಿಪತಿ, ಕೆ.ಬಿ.ಮಾಳ್ಯಾಗೋಳ, ಗೋಪಾಲ ಪತ್ತಾರ, ಶೈಲಾ ಜೋಶಿ, ಶಾಂತಾ ಮಾನೆ, ರಾಜಕುಮಾರ ಮುತಾರೆ, ಶ್ರೀಕಾಂತ ಕರೋಶಿ, ವೈಶಾಲಿ ಡೊಂಗ್ರೆ, ರೂಪಾ ರಾಯಮನೆ, ಸಿದ್ದಪ್ಪ ಮುರಚಿಟ್ಟಿ ಇತರರಿದ್ದರು.