ಜಿಲ್ಲೆ

ಸ್ಕೈವಾಕ್ ಅಳವಡಿಸಲು ಮನವಿ

ಚಿತ್ರದುರ್ಗ: ಜೆಎಂಐಟಿ ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೈವಾಕ್ ಅಳವಡಿಸಬೇಕು ಎಂದು ಒತ್ತಾಯಿಸಿ ಪ್ರಜಾ ಕಲ್ಯಾಣ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕಾಲೇಜು ಎದುರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ದಿನದ 24 ಗಂಟೆಯೂ ಲಾರಿ, ಬಸ್ಸು, ಕಾರು, ಆಟೋ, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಲಗೇಜ್ ಆಟೋಗಳ ದಟ್ಟಣೆ ಇರುವುದರಿಂದ ಅನೇಕ ಅಪಘಾತಗಳು ಸಂಭವಿಸಿ ಸಾವು-ನೋವುಗಳಾಗಿವೆ ಎಂದು ಅಳಲು ತೋಡಿಕೊಂಡರು.

ಶೀಘ್ರ ಸ್ಕೈವಾಕ್ ಅಳವಡಿಸಿ, ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂದು ಕೋರಿದರು.

ಸಮಿತಿ ಅಧ್ಯಕ್ಷ ಟಿ.ಎನ್.ಹರೀಶ್, ಮಹಿಳಾ ಘಟಕದ ಅಧ್ಯಕ್ಷೆ ಸುಕನ್ಯಾ, ಪದಾಧಿಕಾರಿಗಳಾದ ಪೂಜಾರಿ ಕರಿಯಪ್ಪ, ಶ್ರೀನಿವಾಸ್‌ಬಾಬು, ಸುಶೀಲಮ್ಮ, ಎನ್.ಎ.ವಿಜಯಲಕ್ಷ್ಮಿ, ರತ್ನಮ್ಮ ಇತರರಿದ್ದರು.