ಜಿಲ್ಲೆ

ಸ್ಕೇಟಿಂಗ್‌ನಲ್ಲಿ ಲಿಷಿಕಾಗೆ ಚಿನ್ನದ ಪದಕ

ಮೈಸೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ಜು.15 ಹಾಗೂ 16ರಂದು ನಡೆದ ರಾಜ್ಯ ಮಟ್ಟದ ಫಸ್ಟ್ ಕರ್ನಾಟಕ ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಗರದ ಎಸ್.ಲಿಷಿಕಾ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.


ನಗರದ ಎಲೈಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಂಸ್ಥೆ ಪ್ರತಿನಿಧಿಸಿದ್ದ ಲಿಷಿಕಾ, ನಗರದ ಟೆರೇಷಿಯನ್ ವಿದ್ಯಾಸಂಸ್ಥೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಚಾಂಪಿಯನ್‌ಶಿಪ್‌ನ 9ರಿಂದ 11 ವರ್ಷದೊಳಗಿನ ಬಾಲಕಿಯರ ಕ್ವಾರ್ಡ್ ಕೆಟಗರಿ ವಿಭಾಗದ ರೋಡ್ ಒನ್ ಲ್ಯಾಪ್‌ನಲ್ಲಿ ಚಿನ್ನದ ಪದಕ ಹಾಗೂ 100 ಮೀಟರ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.


ಆದಿತ್ಯ ಎಸ್.ರಾವ್ ಹಾಗೂ ಉಮಾ ಮಾರ್ಗದರ್ಶನದಲ್ಲಿ ಲಿಷಿಕಾ ತರಬೇತಿ ಪಡೆಯುತ್ತಿದ್ದಾರೆ. ಲಿಷಿಕಾ ಅವರ ತಂದೆ ಸಂಪತ್ ದ್ವಿಚಕ್ರ ವಾಹನ ರಿಪೇರಿ ಕೆಲಸಗಾರರಾಗಿದ್ದರೆ, ತಾಯಿ ಸಂಧ್ಯಾ ಗೃಹಿಣಿಯಾಗಿದ್ದಾರೆ.