ಜಿಲ್ಲೆ

ಸ್ಕೂಲ್ ಬ್ಯಾಗ್, ಪರೀಕ್ಷಾ ಕಿಟ್ ವಿತರಣೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಈಶ್ವರ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿಎಕೆ ಫೌಂಡೇಷನ್ ವತಿಯಿಂದ ಸ್ಕೂಲ್ ಬ್ಯಾಗ್ ಹಾಗೂ ಪರೀಕ್ಷೆ ಕಿಟ್ಟನ್ನು ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಅಶೋಕ ಕಾಟವೆ ವಿತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾಧ್ಯಾಪಕ ನಾಗರಹಳ್ಳಿ ಮಾತನಾಡಿ, ವೆಂಕಟೇಶ ಕಾಟವೆ ಅವರು 2023-24 ಸಾಲಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಸುಮಾರು 2500 ರೂ. ಮೌಲ್ಯದ ಸ್ಕೂಲ್ ಬ್ಯಾಗ್ ಹಾಗೂ ಪರೀಕ್ಷಾ ಕಿಟ್ ವಿತರಿಸಿದ್ದಾರೆ. ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಇರುವ ಕಾಳಜಿ ಅಪಾರ ಹಾಗೂ ಬಡ ಜನರ ಬೆನ್ನೆಲುಬುವಾಗಿ ನಿಂತು ಶಿಕ್ಷಣ ಕ್ಷೇತ್ರ ಅಲ್ಲದೆ ಸಾಮಾಜಿಕ, ಧಾರ್ವಿುಕ ಹಾಗೂ ಅನೇಕ ರಂಗದಲ್ಲೂ ಅವರು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಭವಿಷ್ಯದಲ್ಲಿ ತಾವು ಜನ ಸೇವೆಗಾಗಿ ಒಬ್ಬ ಸಮರ್ಥ ನಾಯಕನಾಗಿ ಬೆಳೆಯಬೇಕು ಎಂದು ಹಾರೈಸಿದರು.

ವಾರ್ಡಿನ ಪ್ರಮುಖ ಗಂಗಾಧರ ಟಿಕಾರೆ, ಶಕ್ತಿ ಕೇಂದ್ರದ ಪ್ರಮುಖ ವೆಂಕಟೇಶ ಅಂಬಿಗೇರ್, ಸಚಿನ್ ಪೂಜಾರಿ, ಆನಂದ ಬಾಕಳೆ, ಮುಸ್ತಾಕ್ ಅಹಮದ್ ಜವಳಿ, ಸುಲೇಮಾನ್ ಭೋಜಗಾರ, ಆಕಾಶ್ ರಂಗ್ರೆಜ್, ಮಹೇಂದ್ರ ಮಗಜಿಕೊಂಡಿ, ಶ್ರೀಧರ್ ಕಲ್ಬುರ್ಗಿ, ಭರತ ಮೆಹರವಾಡೆ, ಇತರರು ಇದ್ದರು.