ಮೃತ ಶಿಕ್ಷಕಿ ಕುಸುಮ 
ಜಿಲ್ಲೆ

ಸ್ಕೂಟರ್‌ನಿಂದ ಬಿದ್ದು ಶಿಕ್ಷಕಿ ಸಾವು

ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಬಳಿ ಗುರುವಾರ ಸ್ಕೂಟರ್‌ನಿಂದ ಬಿದ್ದು ಶಿಕ್ಷಕಿ ಮೃತಪಟ್ಟಿದ್ದಾರೆ.

ತಾಲೂಕಿನ ಮುಗಳೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಕುಸುಮಾ (38) ಮೃತಪಟ್ಟವರು. ಶಾಲೆ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಹಾಸನ ಕಡೆಗೆ ತೆರಳುತ್ತಿದ್ದಾಗ ದೊಡ್ಡಮಗ್ಗೆ ರಸ್ತೆ ಉಬ್ಬಿನಲ್ಲಿ ಆಯತಪ್ಪಿ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕಿಗೆ ಪತಿ, ಇಬ್ಬರು ಮಕ್ಕಳು ಇದ್ದಾರೆ.