ಜಿಲ್ಲೆ

ಸ್ಕೂಟರ್‌ಗೆ ಕಾರು ಡಿಕ್ಕಿ ಸವಾರ ಸಾವು

ಹಾಸನ: ಹೊಂಡಾ ಆಕ್ಟೀವಾ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಇಬ್ದಾಣೆ-ಸಾಣೇನಹಳ್ಳಿ ಗೇಟ್‌ನಲ್ಲಿ ಸೋಮವಾರ ನಡೆದಿದೆ.
ಬೇಲೂರು ತಾಲ್ಲೂಕು ಬೊಮ್ಮೇನಹಳ್ಳಿ ಗ್ರಾಮದ ಹೇಮಂತ್ (20) ಮೃತ ಯುವಕ. ಸ್ನೇಹಿತರಾದ ಶರತ್ ಹಾಗು ರೋಹಿತ್ ಅವರೊಂದಿಗೆ ಹೇಮಂತ್ ಸ್ಕೂಟರ್‌ನಲ್ಲಿ ಹಾಸನದಿಂದ ವಾಪಾಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಹಾಸನ-ಬೇಲೂರು ರಸ್ತೆಯಲ್ಲಿ ಬೇಲೂರು ಕಡೆಯಿಂದ ಬಂದ ಮಾರುತಿ 800 ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೂರು ಜನರು ಕೆಳಗೆ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಏಟು ಬಿದ್ದಿದ್ದರಿಂದ ಹೇಮಂತ್ ಅಸುನೀಗಿದರು. ರೋಹಿತ್ ಹಾಗು ಶರತ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.