ranna@rannamv.com 
ಜಿಲ್ಲೆ

ಸೌಹಾರ್ದ ಸಮಾವೇಶ ಜ.೧೭ರಿಂದ

ಕಲಬುರಗಿ: ಸೌಹಾರ್ದ ಕರ್ನಾಟಕದಿಂದ ನಗರದಲ್ಲಿ ಜ.೧೭ರಿಂದ ೧೯ರ ವರೆಗೆ ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕಿ ಡಾ.ಮೀನಾಕ್ಷಿ ಬಾಳಿ ಹೇಳಿದರು. ಸೂಪಿ ಶರಣರ ನಾಡಿನಲ್ಲಿಯೂ ಕೋಮುವಾದದ ವಿಷ ಬೀಜ ಕಾಲಿಡುತ್ತಿದೆ. ಇದರತ್ತ ನಮ್ಮ ಯುವಕರು ಸೆಳೆಯಬಾರದು ಎಂದು ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಮೂರು ದಿನದ ಸಮಾವೇಶದಲ್ಲಿ ರಾಜ್ಯದ ಹಲವು ಪ್ರಗತಿಪರ ಚಿಂತಕರು, ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಕೊನೇ ದಿನ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಿರುದ್ಯೋಗ, ಮೈಕ್ರೋ ಪೈನಾನ್ಸ್ಗಳ ಹಾವಳಿ, ದುಬಾರಿ ಶಿಕ್ಷಣ ಸೇರಿ ನಾಡಿನ ಜ್ವಲಂತ ಸಮಸ್ಯೆ ಕುರಿತು ಚರ್ಚಿಸಲಾಗುವುದು. ಹಿಂದು ಕೋಮುವಾದ, ಮುಸ್ಲಿಂ ಮೂಲಭೂತವಾದಿಗಳು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಬಗ್ಗೆ ತಿಳಿ ಹೇಳುವ ಕೆಲಸ ಶರಣರ ನಾಡಿನಿಂದ ಆರಂಭವಾಗಬೇಕು. ಸಮಾವೇಶದಲ್ಲಿ ಎಲ್ಲ ವಿಷಯಗಳ ಕುರಿತು ಹಲವು ಪ್ರಗತಿಪರರು ಮಾತನಾಡಲಿದ್ದಾರೆ ಎಂದು ಹೇಳಿದರು. ಸಂಚಾಲಕರಾದ ಪ್ರೊ.ಆರ್.ಕೆ.ಹುಡಗಿ, ದತ್ತಾತ್ರೇಯ ಇಕ್ಕಳಕಿ, ಆರ್.ಜೆ.ಶೆಟಗಾರ, ಸುಧಾಮ ಧನ್ನಿ, ಮಲ್ಲಿಕಾರ್ಜುನ ವಡ್ಡನಕೇರಿ, ಅಬ್ದುಲ್ ಖಾದರ್, ಪ್ರಭು ಖಾನಾಪುರೆ ಇತರರಿದ್ದರು.