ಯಾದಗಿರಿ: ಸಾರ್ವಜನಿಕ ರಂಗದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಹೆಚ್ಚಿದ್ದು, ಇದರಿಂದ ಸಣ್ಣ ಮತ್ತು ಅತೀಸಣ್ಣ ಉದ್ಯಮಿಗಳಿಗೆ ಆಥರ್ಿಕ ಸೌಲಭ್ಯ ಸಿಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಶುಕ್ರವಾರ ನಗರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಯಾದಗಿರಿ ಸಿಟಿ ಸೌಹಾರ್ದ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಮಾತನಾಡಿ, ಯುವಕರು ಸ್ವಾವಲಂಬಿ ಜೀವನ ಕಲ್ಪಿಸಿಕೊಳ್ಳಲು ಇಂಥ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಎಲ್ಲರಿಗೂ ಸಕರ್ಾರಿ ನೌಕರಿ ಸಿಗಲ್ಲ. ಬೆಳೆಯುತ್ತಿರುವ ನಗರದಲ್ಲಿ ಸೌಹಾರ್ದ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ಆರಂಭಗೊಂಡು ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವಂತಾಗಲಿ ಎಂದು ಹೇಳಿದರು.
ಕರವೇ ಉತ್ತರ ಕನರ್ಾಟಕ ಅಧ್ಯಕ್ಷ ಶರಣು ಬಿ.ಗದ್ದುಗೆ, ಪ್ರಮುಖರಾದ ಬಸ್ಸುಗೌಡ ಬಿಳ್ಹಾರ, ಆಡಳಿತ ಮಂಡಳಿ ಸದಸ್ಯರಾದ ವಿದ್ಯಾಧರ ಸ್ವಾಮಿ, ಶರಣಬಸವ ಸ್ವಾಮಿ, ನಾಗಯ್ಯ ಹಿರೇಮಠ, ರಾಜು ಶೆಟ್ಟಿ ಸಾಹುಕಾರ, ಚನ್ನವೀರಯ್ಯ ಸ್ವಾಮಿ, ಪಂಚಾಕ್ಷರಯ್ಯ ಸ್ವಾಮಿ, ಮಹೇಶ ಪಾಟೀಲ್ ಇದ್ದರು.