ಜಿಲ್ಲೆ

ಸೌಲಭ್ಯ ನೀಡದಿದ್ರೆ ಹೈಕೋರ್ಟ್​ಗೆ ಪಿಐಎಲ್​

ಕಲಬುರಗಿ: ನಗರದ ಸರ‍್ವಜನಿಕರಿಗೆ ಕನಿಷ್ಠ ಮೂಲಸೌರ‍್ಯ ಒದಗಿಸಬೇಕು. ಇಲ್ಲದಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ. ಪಾಲಿಕೆ ವಿರುದ್ಧ ಹೈಕರ‍್ಟ್​ನಲ್ಲಿ ಸರ‍್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್​.ಪಾಟೀಲ್​ ಎಚ್ಚರಿಸಿದರು.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ರ‍್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸರ‍್ವಜನಿಕರಿಗೆ ಕನಿಷ್ಠ ಮೂಲಸೌರ‍್ಯಗಳನ್ನು ಒದಗಿಸಬೇಕು. ಪಾಲಿಕೆ ಆಯುಕ್ತರು ಮತ್ತು ನೌಕರರು ಕರ‍್ಟ್​ನಲ್ಲಿ ಪಿಐಎಲ್​ ಹಾಕುವಂತಹ ಪರಿಸ್ಥಿತಿ ಬಾರದಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ಅಕ್ಕಮಹಾದೇವಿ ಬಡಾವಣೆಯ ಉದ್ಯಾನಗಳಲ್ಲಿ ಎಲ್ಲೆಂದರಲ್ಲಿ ಕಸ ಬೀಳುತ್ತಿದ್ದರೂ ವಿಲೇವಾರಿ ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಕಸವನ್ನು ತಂದು ಪಾಲಿಕೆ ಕಚೇರಿ ಮುಂದೆ ಹಾಕಬೇಕಾಗುತ್ತದೆ. ಬಯಲು ರಂಗಮಂದಿರ ನರ‍್ಮಿಸುವುದಾಗಿ ಹೇಳಿದ್ದೀರಿ? ಅದು ಎಲ್ಲಿಗೆ ಬಂತು ಎಂದು ಪ್ರಶ್ನಿಸಿದರು.

ಉದ್ಯಾನಗಳಲ್ಲಿ ಮಧ್ಯಾಹ್ನವೇ ಕುಡುಕರ ಹಾವಳಿ ಶುರುವಾಗುತ್ತದೆ. ಸಂಜೆ ವೇಳೆ ಮಹಿಳೆಯರು ಓಡಾಡಲು ಆಗುತ್ತಿಲ್ಲ. ಹೀಗಾಗಿ, ಉದ್ಯಾನಗಳು, ಶಾಂತಾ ಆಸ್ಪತ್ರೆ ಮುಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪಾಲಿಕೆ ಆಯುಕ್ತರು ಈಗಾಗಲೇ ಸಾಕಫಿ್ಟು ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ರಿಂಗ್​ ರೋಡ್​ನಾದ್ಯಂತ ಇನ್ನಫಿ್ಟು ಸಸಿಗಳನ್ನು ನೆಡಬೇಕು ಎಂದರು ಶಾಸಕರು ಸೂಚಿಸಿದರು.

ಅಸುರಕ್ಷತೆಯ ಹೈಮಾಸ್ಟ್​ ದೀಪಗಳು: ಱಉದ್ಯಾನ, ರಸ್ತೆ ಬದಿಯಲ್ಲಿನ ಹೈಮಾಸ್ಟ್​ ದೀಪಗಳ ಕಂಬಗಳ ಸುತ್ತ ಬೇಲಿ ಹಾಕಿಲ್ಲ. ಮಕ್ಕಳು ಆಟವಾಡುತ್ತಾ ಬಂದು ಕಂಬಗಳಿಗೆ ಮುಟ್ಟಿದರೆ ಏನಾಗಬೇಕು ಎಂದು ಸಭೆಯಲ್ಲಿ ಸ್ಥಳಿಯರು ಪ್ರಶ್ನಿಸಿದರು.

ಇದಕ್ಕೆ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಪ್ರತಿಕ್ರಿಯಿಸಿ, ೪೩ ಹೈಮಾಸ್ಟ್​ ದೀಪಗಳನ್ನು ನಿಮರ‍್ಣ ಮಾಡಿ ಪಾಲಿಕೆಯ ಸರ‍್ಪದಿಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರೂ ನಾನು ತೆಗೆದುಕೊಂಡಿಲ್ಲ. ಸುರಕ್ಷತಾ ಕ್ರಮಗಳನ್ನು ಅಳವಡಿಸುವವರೆಗೂ ತೆಗೆದುಕೊಳ್ಳುವುದಿಲ್ಲ ಎಂದಿದ್ದೇನೆ. ೨೫ ದೀಪಗಳಿಗೆ ಬೇಲಿ ಹಾಕಿದ್ದಾರೆ. ಇನ್ನೂ ಯಾವೆಲ್ಲ ಪ್ರದೇಶದಲ್ಲಿ ಹೈಮಾಸ್ಟ್​ ದೀಪಗಳ ಅಗತ್ಯವಿದೆ ಎಂಬುದನ್ನು ಸಮೀಕ್ಷೆ ಮಾಡಿ ಕೊಡುವಂತೆಯೂ ಸೂಚಿಸಿದ್ದೇನೆ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ್​, ವಿಧಾನ ಪರಿಷತ್​ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮೇಯರ್​ ಯಲ್ಲಪ್ಪ ನಾಯ್ಕೋಡಿ,