ಮೈಸೂರು: ನಗರದ ಕಾಳಿದಾಸ ರಸ್ತೆಯಲ್ಲಿರುವ ಶ್ರೀಯದುಗಿರಿ ಯತಿರಾಜ ಮಠದ ಶಾಖೆಯ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇಗುಲದಲ್ಲಿ ಶನಿವಾರ ಸೌರಮಾನ ಶ್ರೀಲಕ್ಷ್ಮೀನರಸಿಂಹ ಜಯಂತಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವರ ಉತ್ಸವ ಮೂರ್ತಿಯನ್ನು ಮಂಗಳವಾದ್ಯ, ಇತರ ವೇದಗೋಷ್ಠಿಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ಪ್ರಮುಖರಾದ ವೀರುರಾಘವನ್, ಕರಗಂ ರಾಮಪ್ರಿಯ, ರಾಮು (ಮೇಲುಕೋಟೆ), ತಾತಾಚಾರ್, ವಾಸುಕಿ, ಕೆ.ಆರ್.ಯೋಗನರಸಿಂಹನ್ (ಮುರುಳಿ), ವಿಶ್ವನಾಥ್, ಸಾಯಿರಾಂ ಇತರರು ಇದ್ದರು.