17 ್ಞ್ಜ ್ಞಛಿಡಿ 07 ) ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಸೌಭಾಗ್ಯಾ ಮಂಗಳವಾರ ಅವಿರೋಧ ಆಯ್ಕೆಯಾದರು. ಪಿಡಿಒ ಚೈತ್ರಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಮ್ಮರಗಾಲ ಸೋಮಣ್ಣ, ಮುಖಂಡರಾದ ನಾಗರಾಜು, ಮಹದೇವಯ್ಯ, ಮಹದೇವಸ್ವಾಮಿ, ಕಾಳಪ್ಪ,ಮೂಗ ಶೆಟ್ಟಿ, ಮಂಟೇಲಿಂಗ ಇತರರು ಇದ್ದ್ದರು. 
ಜಿಲ್ಲೆ

ಸೌಭಾಗ್ಯಾ ಅವಿರೋಧ ಆಯ್ಕೆ

ರವಿಕುಮಾರ್ ಪಿ. ಕೆ

ನಂಜನಗೂಡು: ತಾಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಸೌಭಾಗ್ಯಾ ಅವಿರೋಧ ಆಯ್ಕೆಯಾದರು.

ಸುಮತಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಸೌಭಾಗ್ಯಾ ಒಬ್ಬರೇ ನಾಮಪತ್ರವನ್ನು ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಿಲ್ಪಾ ಚುನಾವಣಾ ಅಧಿಕಾರಿಯಾಗಿದ್ದರು. ಸುಮಾರು 23 ಸದಸ್ಯರ ಬಲ ಹೊಂದಿರುವ ದೇವರಸನಹಳ್ಳಿ ಗ್ರಾಪಂನಲ್ಲಿ ಚುನಾವಣೆ ಸಂದರ್ಭ ಮೂವರು ಸದಸ್ಯರು ಗೈರಾಗಿದ್ದರು.

ಅಧ್ಯಕ್ಷೆ ಸೌಭಾಗ್ಯಾ ಮಾತನಾಡಿ, ಮುಂದಿನ 10 ತಿಂಗಳ ಕಾಲ ಉತ್ತಮ ಆಡಳಿತ ನೀಡಿ, ನಮ್ಮ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು. ಜನರಿಗೆ ವಿವಿಧ ರೀತಿಯ ಮೂಲ ಸೌಲಭ್ಯ ಕಲ್ಪಿಸುವುದರೊಂದಿಗೆ ಇದನ್ನು ಮಾದರಿ ಗ್ರಾಪಂ ಮಾಡುವೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೈತ್ರಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಮ್ಮರಗಾಲ ಸೋಮಣ್ಣ, ಗ್ರಾಪಂ ಸದಸ್ಯರಾದ ನಾಗರಾಜು, ರಾಜು, ಮಹದೇವಯ್ಯ, ಮಹದೇವಸ್ವಾಮಿ, ಕಾಳಪ್ಪ, ಮೂಗ ಶೆಟ್ಟಿ, ಸುರೇಶ, ಮಂಟೇಲಿಂಗ ಹಾಜರಿದ್ದರು.