ಜಿಲ್ಲೆ

ಸೌಥ್ ಇಂಡಿಯನ್ ಹೀರೋ 24ರಂದು ತೆರೆಗೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ರಿಯಾನ್ಸಿ ಫಿಲ್ಮಸ್ ಬ್ಯಾನರ್​ನಡಿ ನಿರ್ವಣವಾಗಿರುವ ‘ಸೌಥ್ ಇಂಡಿಯನ್ ಹೀರೋ’ ಸಿನಿಮಾ ಫೆ. 24ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ನರೇಶ ಕುಮಾರ ಎಚ್.ಎನ್. (ಹೊಸಹಳ್ಳಿ) ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಸ್ಟ್​ರ್ಯಾಂಕ್ ರಾಜು ಅಂತಹ ಹಿಟ್ ಸಿನಿಮಾಗಳ ನಂತರ ಇದೀಗ ಸೌಥ್ ಇಂಡಿಯಾ ಹೀರೋ ಸಿನಿಮಾ ನಿರ್ದೇಶನ ಮಾಡಿದ್ದು, ಚಿತ್ರದ ಕಥೆ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾ ಉತ್ತರ ಕರ್ನಾಟಕ ಭಾಷೆಯಲ್ಲಿದೆ. ಚಿತ್ರದಲ್ಲಿ 4 ಹಾಡುಗಳು ಇದ್ದು, ಹಂಪಿ, ಬೆಂಗಳೂರು, ಲಡಾಕ್​ನಲ್ಲಿ ಚಿತ್ರೀಕರಣವಾಗಿದೆ ಎಂದರು.

ಚಿತ್ರದ ನಾಯಕ ನಟ ಸಾರ್ಥಕ, ನಟಿ ಕಾಶೀಮಾ ರಫಿ, ಸಹನಟ ಅಮಿತ್, ಜಗದೀಶ ನಡನಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.