ಕೆ.ಚಂದರಗಿ ಕ್ರೀಡಾ ವಸತಿ ಮಹಾವಿದ್ಯಾಲಯದಲ್ಲಿ ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬರಮಾಡಿಕೊಂಡು ಚಾಲನೆ ನೀಡಲಾಯಿತು. ಶಾಸಕ ಅಶೋಕ ಪಟ್ಟಣ, ಆರ್.ಟಿ. ಬಳಿಗಾರ, ಆನಂದತೀರ್ಥ ಜೋಶಿ, ಪಿ.ಡಿ.ಕಾಲವಾಡ, ಬಿ.ಆರ್.ಪಾಟೀಲ, ರಾಜೇಶ್ವರಿ ಯಾದವಾಡ ಇತರರು ಇದ್ದರು. 
ಜಿಲ್ಲೆ

ಸೋಲು-ಗೆಲುವು ಸಮನಾಗಿ ಸ್ವೀಕರಿಸಲಿ

ಕಟಕೋಳ: ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಿ, ಸೋಲು-ಗೆಲುವು ಸಮನಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಸ್ಪೂರ್ತಿಯಿಂದ ಭಾಗವಹಿಸಬೇಕು ಎಂದು ಶಾಸಕ ಅಶೋಕ ಪಟ್ಟಣ ಎಂದರು.

ಸಮೀಪದ ಕೆ.ಚಂದರಗಿ ಸ್ಪೋಕೋ ಸಂಸ್ಥೆಯ ಕ್ರೀಡಾ ವಸತಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಸೋಲೇ ಗೆಲುವಿನ ಸೋಪಾನ. ಇಂದಿನ ಸೋಲು ನಾಳೆಯ ಗೆಲುವಿಗೆ ನಾಂದಿ ಎಂದರು.

ಕ್ರೀಡಾಕೂಟಕ್ಕೆ ವಿದ್ಯಾರ್ಥಿಗಳು ದೂರದ ಚಂದರಗಿ ಕ್ರೀಡಾ ಶಾಲೆಗೆ ಬರಬೇಕಾಗಿದ್ದು, ಇದರಿಂದ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ರಾಮದುರ್ಗದ ಅಕ್ಕಪಕ್ಕದಲ್ಲಿ ಹೊರಾಂಗಣ ಮತ್ತು ಒಳಗಾಂಗಣ ಕ್ರೀಡೆಗಳು ನಡೆಯುವಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ, ಶಿಕ್ಷಣ ಸಂಯೋಜಕ ಆನಂದತೀರ್ಥ ಜೋಶಿ, ದೈಹಿಕ ಶಿಕ್ಷಣ ಪರಿವೀಕ್ಷಕ ಪಿ.ಡಿ. ಕಾಲವಾಡ, ಸ್ಪೋಕೊ ಸಂಸ್ಥೆ ಅಧ್ಯಕ್ಷ ಬಿ.ಆರ್.ಪಾಟೀಲ (ನಾಗನೂರ), ಉಪಾಧ್ಯಕ್ಷೆ ರಾಜೇಶ್ವರಿ ಯಾದವಾಡ, ನಿರ್ದೇಶಕರಾದ ಮಣಾಲಿನಿ, ಎಂ.ಎಸ್. ಮುನವಳ್ಳಿ, ಎಸ್.ಆರ್ ನವರಕ್ಕಿ, ಉದಯಕುಮಾರ ಸೋಮನಟ್ಟಿ ಇತರರು ಇದ್ದರು.