ಯಲಬುರ್ಗಾ ತಾಲೂಕಿನ ಬಳೂಟಗಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮುಧೋಳ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಬಳೂಟಗಿ ಚಾಲನೆ ನೀಡಿದರು. ಪ್ರಾಚಾರ್ಯೆ ವಿಶ್ವಜ್ಯೋತಿ ಬೆಸ್ತ, ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ, ಶಿಕ್ಷಕರಾದ ಹನುಮಂತಪ್ಪ ವಗ್ಯಾನವರ್, ಶರಣಗೌಡ ಪಾಟೀಲ್ ಇದ್ದರು. 
ಜಿಲ್ಲೆ

ಸೋಲು- ಗೆಲುವು ಎನ್ನದೆ ಕ್ರೀಡೆಯಲ್ಲಿ ಭಾಗವಹಿಸಿ

ಯಲಬುರ್ಗಾ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಸೋಲು- ಗೆಲುವು ಎನ್ನದೆ ಕ್ರೀಡೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಬಳೂಟಗಿ ಹೇಳಿದರು.


ತಾಲೂಕಿನ ಬಳೂಟಗಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಣ ಇಲಾಖೆ ಗುರುವಾರ ಆಯೋಜಿಸಿದ್ದ ಮುಧೋಳ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.


ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೋಲು ಗೆಲುವು ಲೆಕ್ಕಿಸದೇ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆ ಮನೋರಂಜನೆಗೆ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಶಿಕ್ಷಕರು ಶ್ರಮಿಸಬೇಕು. ಕ್ರೀಡಾಪಟುಗಳು ತಾಲೂಕಿನ ಕೀರ್ತಿ ರಾಜ್ಯಮಟ್ಟದಲ್ಲಿ ಪಸರಿಸುವಂತಹ ಸಾಧನೆ ಮಾಡಬೇಕು ಎಂದರು.


ಗ್ರಾಪಂ ಅಧ್ಯಕ್ಷೆ ಶಾಂತಾ ಪುರ್ತಗೇರಿ, ಪ್ರಾಚಾರ್ಯೆ ವಿಶ್ವಜ್ಯೋತಿ ಬೆಸ್ತ, ಪ್ರಮುಖರಾದ ಶಿವಪ್ಪ ತೊಗರಿ, ಶರಣಯ್ಯ ಹಿರೇಮಠ, ಅಲ್ಲಾಸಾಬ್ ಕಟ್ಟಿಮನಿ, ರಾಜಶೇಖರ ಶ್ಯಾಗೋಟಿ, ಶಶಿಧರ ಗಾಣಿಗೇರ, ವಿರೂಪಾಕ್ಷಪ್ಪ ಕುಲ್ಗುಡಿ, ವೆಂಕಟೇಶ ಪೂಜಾರ, ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ ಇತರರಿದ್ದರು.