ಜಿಲ್ಲೆ

ಸೋಲು-ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ

ಚಿತ್ತಾಪುರ; ಸೋಲು-ಗೆಲುವಿಗಿಂತ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಪ್ರಮುಖವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪಾಠದೊಂದಿಗೆ ಆಟೋಟಗಳಿಗೂ ಸಮಯ ನೀಡಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ದೇವೇಂದ್ರರೆಡ್ಡಿ ದುಗನೂರ ಹೇಳಿದರು.

ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಲವಾರ ವಲಯ ಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಗುರಿ ಸಾಧನೆಯತ್ತ ಹೆಜ್ಜೆ ಹಾಕಬೇಕು. ಕ್ರೀಡೆಗಳಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಉದ್ಘಾಟಿಸಿದರು. ವಾಡಿ ಮಹಾತ್ಮಾಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಶೇಖ್ ಅನ್ವರ್ ಅಧ್ಯಕ್ಷತೆವಹಿಸಿದ್ದರು.

ಪ್ರಮುಖರಾದ ನಾಜ್ ಪರ್ವಿನ್, ಸಂತೋಷಕುಮಾರ ಶಿರನಾಳ, ವೆಂಕಟರೆಡ್ಡಿ, ವೆಂಕಟೇಶ, ವೆಂಕಟರೆಡ್ಡಿ ಕುಂಬಾರಹಳ್ಳಿ, ವೀರಭದ್ರಪ್ಪ ಹುಮನಾಬಾದ್, ರಾಜೇಶ್ವರಿ, ಶಿವುಕುಮಾರ, ಬೈಲಪ್ಪ, ಬಸವರಾಜ ಮದ್ದೂರ, ಮರೆಪ್ಪ ಬೊಮ್ಮನಳ್ಳಿ, ವಿಶ್ವಾರಾಧ್ಯ ಕರದಾಳ, ಅಯ್ಯಪ್ಪ, ಷಣ್ಮುಖ ಇತರರಿದ್ದರು.
ವೀರಭದ್ರಪ್ಪ ಗುರುಮಠಕಲ್ ಸ್ವಾಗತಿಸಿದರು. ಶ್ರೀನಾಥ ಹಲಕರ್ಟಿ ನಿರೂಪಣೆ ಮಾಡಿದರು.